ಪ್ರಾತಿನಿಧಿಕ ಚಿತ್ರ
ಶಿವಮೊಗ್ಗ: ಪುಣೆಯ ಕರ್ಕಿಯಲ್ಲಿರುವ ಬಾಂಬೆ ಎಂಜಿನಿಯರಿಂಗ್ ಗ್ರೂಪ್‌ನಲ್ಲಿ ಯುಎಚ್‌ಕ್ಯೂ ಕೋಟಾದಡಿ ಮಾಜಿ ಸೈನಿಕರ ಮಕ್ಕಳು ಹಾಗೂ ಅವರ ಅವಂಬಿತರಿಗಾಗಿ ಆಗಸ್ಟ್ 4 ರಿಂದ ಸೆಪ್ಟಂಬರ್ 4 ರವರೆಗೆ ಅಗ್ನಿವೀರ್ (ಜನರಲ್ ಡ್ಯೂಟಿ, ಟೆಕ್ನಿಕಲ್) ಮತ್ತು ಅಗ್ನಿವೀರ್ (ಟ್ರೇಡ್‌ಮನ್ 8ನೇ ಮತ್ತು 9ನೇ ತರಗತಿ ಪಾಸ್) ಹಾಗೂ ಅಗ್ನಿವೀರ್ ಸ್ಪೋರ್ಟ್ಸ್‌ಮನ್‌ಗೆ (ಓಪನ್ ಕೆಟಗರಿ) ನೇಮಕಾತಿ ನೆಡೆಯಲಿದೆ.
ಈ ನೇಮಕಾತಿಯು ಅಗ್ನಿಪಥ್ ಯೋಜನೆಯ ಭಾಗವಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ www.bsakirrkee.org ಹಾಗೂ ದೂ.ಸಂ. 08182-220925 ಅನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಹೆಚ್ಚುವರಿ ಉಪ ನಿರ್ದೇಶಕ ಡಾ. ಸಿ.ಎ. ಹೀರೆಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.