ADVERTISEMENT

ಅಮೆರಿಕ ಹಾಲು ಆಮದಿಗೆ ಜಿಲ್ಲೆಯಲ್ಲೂ ವಿರೋಧ: ಕಲ್ಲೂರು ಮೇಘರಾಜ್ ಕಳವಳ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 8:58 IST
Last Updated 18 ಫೆಬ್ರುವರಿ 2020, 8:58 IST
ಕಲ್ಲೂರು ಮೇಘರಾಜ್
ಕಲ್ಲೂರು ಮೇಘರಾಜ್   

ಶಿವಮೊಗ್ಗ: ಕೇಂದ್ರ ಸರ್ಕಾರಸುಂಕ ರಹಿತಹಾಲು, ಕುಕ್ಕುಟೋದ್ಯಮದಉತ್ಪನ್ನಗಳನ್ನು ಅಮೆರಿಕದಿಂದ ಆಮದು ಮಾಡುಕೊಳ್ಳಲುನಿರ್ಧರಿಸಿರುವುದು ಅತ್ಯಂತ ಅಪಾಯಕಾರಿನಡೆಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ಕಳವಳ ವ್ಯಕ್ತಪಡಿಸಿದರು.

ಫೆ.24 ಮತ್ತು 25ರಂದು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅವರನ್ನು ಮೆಚ್ಚಿಸಲುಅಮೆರಿಕದಉತ್ಪನ್ನಕ್ಕೆ ಕೆಂಪು ಹಾಸಿನ ಸ್ವಾಗತ ನೀಡಲಾಗುವುದು. ಆಮದು ಒಪ್ಪಂದಪರಿಣಾಮ ದೇಶದ ಲಕ್ಷಾಂತರ ಗ್ರಾಮೀಣ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಹಾಲು ಉತ್ಪಾದಿಸುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಹಾಲು, ಹಾಲಿನಉತ್ಪನ್ನಗಳ ಉದ್ಯಮದ ಮೇಲೆ ಕೋಟ್ಯಂತರ ಕುಟುಂಬಗಳು ಜೀವನ ನಡೆಸುತ್ತಿವೆ. ಈ ಕುಟುಂಬಗಳ ರಕ್ಷಣೆಗಾಗಿಯೇ ಚೀನಾ ಸಾರಥ್ಯದ ರಾಷ್ಟ್ರಗಳ ಮುಕ್ತ ವ್ಯಾಪಾರದ ಒಪ್ಪಂದದಿಂದ ಭಾರತ ಹಿಂದೆ ಸರಿದಿತ್ತು. ಈಗ ಅಮೆರಿಕ ಅಧ್ಯಕ್ಷರಮೆಚ್ಚಿಸಲುಪ್ರಧಾನಿ ಮೋದಿಇಂತಹ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಪ್ರಸ್ತುತ ಕೋಳಿ ಉತ್ಪನ್ನಗಳ ಮೇಲೆ ಶೇ 100ರಷ್ಟು ತೆರಿಗೆಯಿದೆ. ಶೇ 25ಕ್ಕೆ ಇಳಿಸಲು ಕೇಂದ್ರ ನಿರ್ಧರಿಸಿದೆ. ಇದನ್ನು ಶೇ 10ಕ್ಕೆ ಇಳಿಸಬೇಕು ಎಂದು ಅಮೆರಿಕಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಹೇರಳವಾಗಿ ಕೋಳಿ, ಮಾಂಸ ತಯಾರಿಸಲಾಗುತ್ತಿದೆ. ಸುಂಕ ರಹಿತಆಮದಿಗೆ ಅವಕಾಶ ಕಲ್ಪಿಸಿದರೆ ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶದ ಪೌಲ್ಟ್ರಿ ಫಾರಂಗಳು ಮುಚ್ಚಲಿವೆಎಂದು ಆತಂಕ ವ್ಯಕ್ತಪಡಿಸಿದರು.

ದೇಶದ ರೈತರ ಆಕ್ರೋಶ, ಪ್ರತಿಭಟನೆಗೆ ಮಣಿದು ಪ್ರಾದೇಶಿಕ ಸಮಗ್ರ, ಆರ್ಥಿಕ ಸಹಭಾಗಿತ್ವ ಒಪ್ಪಂದದಿಂದ ಹಿಂದೆ ಸರಿದಿದ್ದ ಕೇಂದ್ರ ಈಗಲೂ ಅಂತಹ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ ಮುಖಂಡರಾದಎಸ್.ವಿ.ರಾಜಮ್ಮ, ಹೊಳೆಮಡಿಲು ವೆಂಕಟೇಶ್, ಎಚ್.ಎಂ.ಸಂಗಯ್ಯ, ಎಲ್. ಆದಿಶೇಷ, ಸಂಕ್ರಾನಾಯ್ಕಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.