
ಪ್ರಜಾವಾಣಿ ವಾರ್ತೆ
ಶಿಕಾರಿಪುರ: ಕೇಂದ್ರ ಶಿಕ್ಷಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ರಾಷ್ಟ್ರೀಯ ಉರ್ದು ಭಾಷಾ ವಿಕಾಸ ಪರಿಷತ್‌ಗೆ ಪಟ್ಟಣದ ಸಾಹಿತಿ ಅಮ್ಜದ್ ಹುಸೇನ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗಿದೆ.
ಉರ್ದು ಭಾಷೆ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುವ ಗುರಿ, ಉದ್ದೇಶ ಇಟ್ಟುಕೊಂಡು ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಉರ್ದು ಭಾಷಾ ವಿಕಾಸ ಪರಿಷತ್ ಅದಕ್ಕಾಗಿ ಹಲವು ಸಮಿತಿ ರಚಿಸಿದ್ದು, ಅವುಗಳಲ್ಲಿ ‘ಸೃಜನಶೀಲ ಬರವಣಿಗೆ ಮತ್ತು ಮಕ್ಕಳ ಸಾಹಿತ್ಯ’ ವಿಭಾಗಕ್ಕೆ ಅಮ್ಜದ್ ಹುಸೇನ್ ನೇಮಕಗೊಂಡಿದ್ದಾರೆ. ಅವರು ಉರ್ದು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಅವರು ರಚಿಸಿದ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.