ADVERTISEMENT

ಅಡಿಕೆ ಕಳವು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 8:57 IST
Last Updated 1 ನವೆಂಬರ್ 2023, 8:57 IST

ಹೊಸನಗರ: ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಕಳವು ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಟ್ವಣದ ಮಾವಿನಕೊಪ್ಪ ನಿವಾಸಿಗಳಾದ ಎನ್. ರವಿರಾಜ್, ಪಿ. ನಾಗರಾಜ್, ರಾಜೇಶ್ ಬಂಧಿತರು. ಪಟ್ಟಣದ ಸಮೇದಾ ಅಡಿಕೆ ಮಂಡಿಯಲ್ಲಿ ಸಂಗ್ರಹಿಸಿದ್ದ 20 ಕ್ವಿಂಟಲ್ ಅಡಿಕೆಯನ್ನು ಕಳೆದ ತಿಂಗಳು ಇವರು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ ಗುರಣ್ಣ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಪಿಎಸ್ಐ ಶಿವಾನಂದ ಕೋಳಿ ನೇತೃತ್ವದಲ್ಲಿ ಎಎಸ್ಐ ಸುರೇಶ್ ರಾಜ್, ಸಿಬ್ಬಂದಿ ಸುನೀಲ್, ರಂಜಿತ್, ಗಂಗಪ್ಪ ಬಟೋಲಿ, ಸಂದೀಪ್, ನಾಗೇಶ್ ಅವರ ತಂಡ ಕಾರ್ಯಾಚರಣೆ ನಡೆಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.