ADVERTISEMENT

ಶಿವಮೊಗ್ಗ: ₹ 12 ಸಾವಿರ ಗೌರವಧನಕ್ಕೆ ಆಶಾ ಕಾರ್ಯಕರ್ತೆಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 13:24 IST
Last Updated 10 ಜುಲೈ 2020, 13:24 IST
ಶಿವಮೊಗ್ಗದಲ್ಲಿ ಶುಕ್ರವಾರ ಆಶಾ ಕಾರ್ಯಕರ್ತರು ಮಾಸಿಕ ₨ 12 ಸಾವಿರ ಗೌರವಧನ ಖಾತರಿಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಆಶಾ ಕಾರ್ಯಕರ್ತರು ಮಾಸಿಕ ₨ 12 ಸಾವಿರ ಗೌರವಧನ ಖಾತರಿಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಆಶಾ ಕಾರ್ಯಕರ್ತರಿಗೆಮಾಸಿಕ ₹ 12 ಸಾವಿರ ಗೌರವಧನ ಖಾತರಿಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸಂಯಕ್ತ ಆಶಾಕಾರ್ಯಕರ್ತೆಯರಸಂಘಟನೆ ಸದಸ್ಯರುಶುಕ್ರವಾರಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು.

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಸುರಕ್ಷಣಾ ಸಾಮಾಗ್ರಿ ನೀಡಬೇಕು. ಕೋವಿಡ್‌ಗೆತುತ್ತಾದ ಕಾರ್ಯಕರ್ತೆಯರಿಗೆಪರಿಹಾರ, ಸಂಪೂರ್ಣ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.

ಸಂಪೂರ್ಣ ಸೇವೆ ಸ್ಥಗಿತಗೊಳಿಸಿರುವಆಶಾ ಕಾರ್ಯಕರ್ತೆಯರುಅನಿರ್ದಿಷ್ಟಾವಧಿಹೋರಾಟಹಮ್ಮಿಕೊಂಡಿದ್ದಾರೆ. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಈ ಹಿಂದೆಯೇ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಈಚೆಗೆಕೇಂದ್ರ ಆರೋಗ್ಯ ಸಚಿವಾಲಯಕೊರೊನಾವಿರುದ್ಧದ ಹೋರಾಟದಲ್ಲಿಮಾಡಿದ ಉತ್ತಮ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕೊರೋನಾ ತಡೆ ಯಶಸ್ಸಿಗೆನೀಡಿದ ಕೊಡುಗೆಶ್ಲಾಘಿಸಲಾಗಿದೆ ಎಂದರು.

ADVERTISEMENT

ವೇತನವಿಲ್ಲದೇ, ರಕ್ಷಣೆ ಇಲ್ಲದೇ ಬಳಲಿ ಬೆಂಡಾಗಿದ್ದಾರೆ. ದುಡಿಮೆಗೆ ತಕ್ಕ ಪ್ರತಿಫಲವಿಲ್ಲದೇ ಅನಿಶ್ಚಿತ ವೇತನಪಡೆಯುತ್ತಿದ್ದಾರೆ. ಬದುಕು ಸಂಕಷ್ಟದಲ್ಲಿದೆ. ಸರ್ಕಾರ ಗೌರವಧನ, ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ₹ 12 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.