ADVERTISEMENT

ಆಗುಂಬೆ: ಭಾರಿ ವಾಹನಗಳ ಸಂಚಾರ ನಿಷೇಧ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 14:12 IST
Last Updated 9 ಸೆಪ್ಟೆಂಬರ್ 2020, 14:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಆಗುಂಬೆ ಮಾರ್ಗದಲ್ಲಿ 12 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರ ಮತ್ತೆ ನಿಷೇಧಿಸಲಾಗಿದೆ.

ಆಗುಂಬೆ ಘಾಟಿ ರಸ್ತೆ ಕಿರಿದಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ಹಾಗಾಗಿ, ಅಧಿಕ ಭಾರದ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ವಾಹನಗಳು ಶಿವಮೊಗ್ಗ-ತೀರ್ಥಹಳ್ಳಿ – ಆಗುಂಬೆ- ಶೃಂಗೇರಿ- ಕೆರೆಕಟ್ಟೆ- ಕಾರ್ಕಳ- ಉಡುಪಿ- ಮಂಗಳೂರು ಅಥವಾ ಮಾಸ್ತಿಕಟ್ಟೆ – ಹುಲಿಕಲ್ – ಹೊಸಂಗಡಿ – ಸಿದ್ಧಾಪುರ – ಉಡುಪಿ ಮಾರ್ಗಗಳ ಮೂಲಕ ಸಂಚರಿಸುವಂತೆ ಸೂಚಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.