ಭದ್ರಾವತಿ: ನಗರದ ಅಶ್ವತ್ ನಗರ ಭಾಗದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಸದಾ ಗರ್ಭಿಣಿಯರು, ಬಾಣಂತಿಯರು ಬರುತ್ತಾರೆ, ಆದರೆ, ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆಸ್ಪತ್ರೆಯ ಸುತ್ತಲೂ ಹಸಿರು ಪಾಚಿ ಕಟ್ಟಿ ನಡೆದಾಡಲು ಕಷ್ಟವಾಗಿದೆ.
ಆವರಣದ ತುಂಬೆಲ್ಲ ಪಾಚಿ ಪಾಚಿಕಟ್ಟಿದ್ದು, ಜಾರುವ ಪರಿಸ್ಥಿತಿ ಇದೆ. ಹಾಗಾಗಿ ನೆಲದ ಮೇಲೆ ಗರ್ಭಿಣಿಯರು ನಡೆದಾಡಲು ಭುಪಡುತ್ತಿದ್ದಾರೆ.
ಆರೋಗ್ಯ ಕೇಂದ್ರಕ್ಕೆ ಮಕ್ಕಳು, ವಯೋವೃದ್ಧರು, ರೋಗಿಗಳು ಆಗಮಿಸುವುದರಿಂದ ಪಾಚಿ ಹಿಡಿದಿರುವ ನೆಲವನ್ನು ಸ್ವಚ್ಛಗೊಳಿಸಬೇಕೆಂದು ಸ್ಥಳೀಯರಾದ ಲೂರ್ದ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.