ADVERTISEMENT

ಅಸ್ಪೃಶ್ಯತೆ ವಿರುದ್ಧದ ದಿಗ್ವಿಜಯವೇ ಭೀಮ ಕೋರೆಗಾವ್ ಯುದ್ಧ: ಪ್ರೊ.ಟಿ.ಅವಿನಾಶ್

ಡಿಎಸ್‌ಎಸ್ ಕಾರ್ಯಾಲಯ; ಪ್ರೊ.ಟಿ.ಅವಿನಾಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 5:16 IST
Last Updated 5 ಜನವರಿ 2026, 5:16 IST
ಶಿವಮೊಗ್ಗದ ದಲಿತ ಸಂಘರ್ಷ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ಈಚೆಗೆ ನಡೆದ 28ನೇ ಭೀಮಾ ಕೋರೆಗಾವ್ ವಿಜಯೋತ್ಸವ ದಿನ ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಅವಿನಾಶ್ ಉದ್ಘಾಟಿಸಿದರು.
ಶಿವಮೊಗ್ಗದ ದಲಿತ ಸಂಘರ್ಷ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ಈಚೆಗೆ ನಡೆದ 28ನೇ ಭೀಮಾ ಕೋರೆಗಾವ್ ವಿಜಯೋತ್ಸವ ದಿನ ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಅವಿನಾಶ್ ಉದ್ಘಾಟಿಸಿದರು.   

ಶಿವಮೊಗ್ಗ: ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಮಹಾನ್ ದಿಗ್ವಿಜಯ ಸಾಧಿಸಿದ ದಿನವೇ ಭೀಮ ಕೋರೆಗಾವ್ ಯುದ್ಧ ಎಂದು ಸಹ್ಯಾದ್ರಿ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಅವಿನಾಶ್ ಹೇಳಿದರು.

ದಲಿತ ಸಂಘರ್ಷ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ಈಚೆಗೆ ನಡೆದ 28ನೇ ಭೀಮಾ ಕೋರೆಗಾವ್ ವಿಜಯೋತ್ಸವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭೀಮ ಕೋರೆಗಾವ್ ಯುದ್ಧವು ದೇಶದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಹೇಳಿದರಲ್ಲದೆ ಇದು ದಲಿತ ಸಮುದಾಯದವರಿಗೆ ಸ್ವಾಭಿಮಾನ ಮತ್ತು ಸ್ಪೂರ್ತಿಯ ಸಂಕೇತವಾಗಿದೆ ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ವಹಿಸಿದ್ದರು. ಮಾಯಕೊಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎ.ಕೆ.ತಿಮ್ಮಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ನಿವೃತ್ತ ಪ್ರಾಧ್ಯಾಪಕ ಚಂದ್ರಪ್ಪ ಜೋಗಿ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಸೂರ್ಯ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬೊಮ್ಮನಕಟ್ಟೆ ಕೃಷ್ಣ, ಶಿಮೊಗ್ಗ ತಾಲ್ಲೂಕು ಸಂಚಾಲಕ ರಮೇಶ್ ಚಿಕ್ಕಮರಡಿ, ಸೊರಬ ತಾಲ್ಲೂಕು ಸಂಚಾಲಕ ಹಸ್ವಿ ಬಸವರಾಜ್, ಯಡವಾಲ ಹನುಮಂತಪ್ಪ, ಜೀನಳ್ಳಿ ಅಶೋಕ್, ನಗರ ಸಂಚಾಲಕರಾದ ಹರಿಗೆ ರವಿ, ಮನ್ಸೂರ್ ಲಕ್ಕವಳ್ಳಿ, ರಾಮನಗರ ನೀಲಪ್ಪ, ನಟರಾಜ್ ಶಿಲ್ಪಿ, ಗಾಜನೂರು ಹರೀಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.