ADVERTISEMENT

ಬಿಜೆಪಿ ನಾಯಕರ ಭಾವನಾತ್ಮಕ ಹೇಳಿಕೆಯಿಂದ ಕಾಂಗ್ರೆಸ್‍ಗೆ ಹಿನ್ನಡೆ: ಆರ್.ಸಿ.ಪಾಟೀಲ್

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 15:44 IST
Last Updated 6 ಜೂನ್ 2024, 15:44 IST
ಆರ್.ಸಿ.ಪಾಟೀಲ್
ಆರ್.ಸಿ.ಪಾಟೀಲ್   

ಆನವಟ್ಟಿ: ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕರು ಮತದಾರರನ್ನು ಭಾವನಾತ್ಮಕ ಹೇಳಿಕೆಗಳಿಂದ ಮರಳುಗೊಳಿಸಿ, ಬಿಜೆಪಿಗೆ ಮತ ಹಾಕುವಂತೆ ಪ್ರೇರೆಪಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್‍ ಜಿಲ್ಲಾ ಘಟಕದ ಉಪಾಧ್ಯಕ್ಷ ಆರ್.ಸಿ. ಪಾಟೀಲ್‍ ತಿಳಿಸಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವಕುಮಾರ್ ಅವರಿಗೆ ಒಳ್ಳೆಯ ವಾತಾವರಣವಿತ್ತು. 5.35 ಲಕ್ಷ ಮತಗಳನ್ನು ಕ್ಷೇತ್ರದ ಜನರು ನೀಡಿದ್ದಾರೆ. ಬಿಜೆಪಿ ಅವರ ವಿರುದ್ಧ ಮಾಡಿರುವ ಅಪಪ್ರಚಾರ ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಮಾಹಿತಿ ಹರಡಿ ಮತದಾರರಲ್ಲಿ ಗೊಂದಲ ಸೃಷ್ಟಿಸಿದ್ದರಿಂದ ಸೋಲಾಗಿದೆ. ಮುಂದೆ ಕಾಂಗ್ರೆಸ್‍ ಸಂಘಟನೆಯನ್ನು ಬಲಗೊಳಿಸಿ, ಶಿವಮೊಗ್ಗವನ್ನು ಕಾಂಗ್ರೆಸ್‍ನ ಭದ್ರಕೋಟೆ ಮಾಡಿಕೊಳ್ಳತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT