ADVERTISEMENT

ಉದ್ಯಮಿ ಎಂ.ಭಾರದ್ವಾಜ್ ನಿಧನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 2:17 IST
Last Updated 22 ಜೂನ್ 2022, 2:17 IST
ಎಂ.ಭಾರದ್ವಾಜ್
ಎಂ.ಭಾರದ್ವಾಜ್   

ಶಿವಮೊಗ್ಗ: ಜಿಲ್ಲೆಯ ಉದ್ಯಮಿಎಂ.ಭಾರದ್ವಾಜ್ (89) ಮಂಗಳವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಶಿವಮೊಗ್ಗದಲ್ಲಿ ಪಾಫ್ಯುಲರ್ ಸೈಕಲ್ ಮಾರ್ಟ್ ಸ್ಥಾಪಿಸಿ ಹೀರೋ ಸೈಕಲ್ ಮತ್ತು ಹೀರೋ ಹೊಂಡಾ ಮೋಟಾರ್ ಬೈಕ್ ಮಾರಾಟಗಾರರಾಗಿ, ಉದ್ಯಮಿಯಾಗಿ, ಅನೇಕ ಸಂಘ–ಸಂಸ್ಥೆಗಳ ಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.

1988ರಿಂದ 98ರವರೆಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಮಾಚೇನಹಳ್ಳಿ ಕೈಗಾರಿಕಾ ವಸಾಹತು ಸ್ಥಾಪನೆ ಹಾಗೂ ರೈಲ್ವೆ ಅಭಿವೃದ್ಧಿಗೆ ದುಡಿದಿದ್ದರು. ರೋಟರಿ ಶಿವಮೊಗ್ಗ, ವಿದ್ಯಾಭಾರತಿ ಟ್ರಸ್ಟ್, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು, ಎಜುಕೇರ್ ಸಂಸ್ಥಾಪಕ ಅಧ್ಯಕ್ಷರು, ಆಟೊಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷರಾಗಿ, ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿ, ಭಾರತೀಯ ವಿದ್ಯಾಭವನದ ಶಿವಮೊಗ್ಗ ಶಾಖೆ ಉಪಾಧ್ಯಕ್ಷ ರಾಗಿದ್ದರು.

ADVERTISEMENT

ತಮ್ಮ ತಂದೆ ದೊರೆಸ್ವಾಮಿ ಅಯ್ಯಂಗಾರ್ ಸ್ಮರಣಾರ್ಥ ಟ್ರಸ್ಟ್ ಸ್ಥಾಪಿಸಿ ದೇಶದ ಸಂಗೀತ ದಿಗ್ಗಜರನ್ನು ಶಿವಮೊಗ್ಗಕ್ಕೆ ಕರೆತಂದು ಸಂಗೀತದ ರಸದೌತಣ ಉಣಬಡಿಸಿದ್ದರು. ಶಿವಮೊಗ್ಗದಲ್ಲಿ ಪಾಪ್ಯುಲರ್ ಸೈಕಲ್ ಶಾಪ್ ಭಾರದ್ವಾಜ್ ಎಂದೇ ಪ್ರಸಿದ್ಧರಾಗಿದ್ದರು.

ಶ್ರೀರಾಮ ಸೇವಾ ಮಂಡಳಿ, ವಿದ್ಯಾ ಗಣಪತಿ ಸೇವಾ ಸಂಸ್ಥೆ, ಕರ್ನಾಟಕ ಸಂಘ ಮೊದಲಾದ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.