ADVERTISEMENT

ಹೊಸ ಸಂಶೋಧನೆಗಳ ಕವಚ ‘ಅನ್ವೇಷಣಾ ಪ್ರಾಧಿಕಾರ’

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 11:23 IST
Last Updated 13 ಫೆಬ್ರುವರಿ 2020, 11:23 IST

ಶಿವಮೊಗ್ಗ: ಮುಂದಿನ ಅಧಿವೇಶನದಲ್ಲಿ ‘ಅನ್ವೇಷಣಾಪ್ರಾಧಿಕಾರ’ ಮಸೂದೆ ಮಂಡಿಸಲಾಗುವುದು. ಆ ಮೂಲಕ ಹೊಸ ಪರಿಕಲ್ಪನೆಗಳ ಶೋಧನೆಗಳಿಗೆ ಒತ್ತು ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ಪ್ರಾಧಿಕಾರ ರಚನೆಯ ಮೂಲಕ ಸಂಶೋಧನೆಗಳಿಗೆ ಎದುರಾಗುವ ಕಾನೂನಾತ್ಮಕ ತೊಂದರೆಗಳನ್ನು ನಿವಾರಿಸಲಾಗುವುದು. ಹೆಚ್ಚಿನ ಆರ್ಥಿಕ ನೆರವು ಒದಗಿಸಲಾಗುವುದು. ಸಂಶೋಧನೆ ಕೈಗೊಳ್ಳುವವರಿಗೆ ಆರ್ಥಿಕ ನೆರವುಒದಗಿಸಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಶೋಧನೆಗಳು ಕೇವಲ ವಿಶ್ವವಿದ್ಯಾಲಯಗಳಿಗೆ ಸೀಮಿತವಾಗಬಾರದು.ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು. ಜನಸಾಮಾನ್ಯರನ್ನುತಲುಪಬೇಕು.ಹೊಸ ಸಂಶೋಧನೆಗಳಿಗೆಪೇಟೆಂಟ್ ಪಡೆಯಲೂಸರ್ಕಾರ ಆರ್ಥಿಕ ನೆರವು ಒದಗಿಸುತ್ತದೆ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತದೆ. ನಕಲಿ ಸಂಶೋಧನೆಗಳು, ನಕಲಿ ಗೌರವ ಡಾಕ್ಟರೇಟ್‌ಗಳ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ರಾಜ್ಯದ ಹಲವೆಡೆ ಧಾರವಾಡ ತರಬೇತಿ ಸಂಸ್ಥೆಮಾದರಿಯಲ್ಲಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಹೊಸ ಕಲಿಕಾ ವಿಧಾನ ಹಾಗೂ ಕೌಶಲ ಸುಧಾರಣೆಗೆಒತ್ತು ನೀಡಲಾಗುವುದು. ಅಂಗನವಾಡಿ ಹಂತದಿಂದಲೇ ಗುಣಮಟ್ಟದ ಕಲಿಕೆಗೆ ಒತ್ತು ನೀಡಲಾಗುವುದು ಎಂದು ವಿವರ ನೀಡಿದರು.

ರಾಜ್ಯದ ಎಲ್ಲವಿಶ್ವವಿದ್ಯಾಲಯಗಳಲ್ಲೂಸಂಸ್ಕೃತ-ಸಂಗೀತ ವಿಭಾಗ ತೆರೆಯಲುಚಿಂತನೆನಡೆದಿದೆ.ಮಾಗಡಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ 100 ಎಕರೆ ಜಾಗ ನಿಗದಿಯಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.