ADVERTISEMENT

ಮಳೆ ಹಾನಿ ಪ್ರದೇಶಗಳಿಗೆ ಕಾಂಗ್ರೆಸ್ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 16:26 IST
Last Updated 13 ಆಗಸ್ಟ್ 2020, 16:26 IST
ಶಿವಮೊಗ್ಗದ ಮಳೆಹಾನಿ ಪ್ರದೇಶಗಳಿಗೆ ಗುರುವಾರ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್‌.ಸಿ.ಯೋಗೀಶ್ ತಂಡ ಭೇಟಿ ನೀಡಿತ್ತು.
ಶಿವಮೊಗ್ಗದ ಮಳೆಹಾನಿ ಪ್ರದೇಶಗಳಿಗೆ ಗುರುವಾರ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್‌.ಸಿ.ಯೋಗೀಶ್ ತಂಡ ಭೇಟಿ ನೀಡಿತ್ತು.   

ಶಿವಮೊಗ್ಗ: ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಗುರುವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್‌.ಎಸ್.ಸುಂದರೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ ಭೇಟಿ ನೀಡಿ ಜನರ ಅಹವಾಲು ಆಲಿಸಿದರು.

ಜೆ.ಸಿ.ನಗರ, ಅಶೋಕ ನಗರ, ರಾಜೀವ್‌ಗಾಂಧಿ ಬಡಾವಣೆ, ಚೌಡೇಶ್ವರಿ ಕಾಲೊನಿ ಪ್ರದೇಶಗಳಿಗೆ ಭೇಟಿ ನೀಡಿದರು. ಪಾಲಿಕೆಕೈಗೊಂಡ ಕ್ರಮಗಳ ಮಾಹಿತಿ ಪಡೆದರು. ಬಿದ್ದ ಮನೆಗಳ ಅವಶೇಷ ವೀಕ್ಷಿಸಿದರು.

ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಶೇ 75ಕ್ಕಿಂತ ಹೆಚ್ಚು ಹಾನಿಗೆ ₹ 5 ಲಕ್ಷ, ಭಾಗಶಃ ಮನೆಗಳಿಗೆ ₹ 3 ಲಕ್ಷ, ಶೇ 25ಕ್ಕಿಂತ ಕಡಿಮೆ ಹಾನಿಗೆ ₹ 50 ಸಾವಿರ ನೀಡಲಾಗುತ್ತಿದೆ. ಪರಿಹಾರ ನೀಡುವ ಪ್ರಕ್ರಿಯೆ ಹಲವು ಹಂತಗಳನ್ನು ದಾಟಬೇಕಿದೆ. ಈ ಪ್ರಕ್ರಿಯೆ ಸರಳಗೊಳಿಸಬೇಕು ಎಂದು ಯೋಗೀಶ್ ಒತ್ತಾಯಿಸಿದರು.

ADVERTISEMENT

ಖಾತೆ ಇಲ್ಲದ ಕುಟುಂಬಗಳಿಗೆ ನೆರವು ನೀಡುತ್ತಿಲ್ಲ. ಇದು ತಾರತಮ್ಯ. ಅಂತಹ ಬಡವರ ಸ್ಥಿತಿ ಶೋಚನೀಯವಾಗಿದೆ. ಅವರಿಗೂ ಮಾನವೀಯತೆ ಆಧಾರದಲ್ಲಿ ನೆರವು ನೀಡಬೇಕು. ಹಿಂದಿನ ಮಳೆಗಾಲದಲ್ಲಿ ಮನೆ ಕಳೆದುಕೊಂಡವರಿಗೆ ಬಾಕಿ ಇರುವಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೆಹಕ್ ಷರೀಫ್, ಪಿ.ವಿ.ವಿಶ್ವನಾಥ್, ಕೆ.ರಂಗನಾಥ್, ಪ್ರವೀಣ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.