ADVERTISEMENT

ಶಿವಮೊಗ್ಗ: ಸೋಂಕಿತರಿಗಿಂತ ಗುಣಮುಖರೇ ಹೆಚ್ಚು

230 ಜನರಿಗೆ ಕೊರೊನಾ, 314 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 7:16 IST
Last Updated 17 ಸೆಪ್ಟೆಂಬರ್ 2020, 7:16 IST

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯ ಸೇರಿ 230 ಜನರಿಗೆ ಕೊರೊನಾ ಇರುವುದು ದೃಢಪಟ್ಟಿದೆ. 6 ಜನ ಮೃತಪಟ್ಟಿದ್ದಾರೆ.314 ಮಂದಿ ಗುಣಮುಖರಾಗಿದ್ದಾರೆ.

1693 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಮನೆಯಲ್ಲಿ 1083 ಸೇರಿ ಒಟ್ಟು 2199 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದುವರೆಗೆ ಮೃತಪಟ್ಟವರ ಸಂಖ್ಯೆ 218ಕ್ಕೆ ಏರಿದೆ.

ಸೋಂಕಿತರ ಸಂಖ್ಯೆ 12,465ಕ್ಕೆ ತಲುಪಿದೆ.ಶಿವಮೊಗ್ಗ ನಗರದಲ್ಲೇ131 ಸೋಂಕಿತರು ಪತ್ತೆಯಾಗಿದ್ದಾರೆ. ಭದ್ರಾವತಿ ತಾಲ್ಲೂಕಿನಲ್ಲಿ 38, ಶಿಕಾರಿಪುರದಲ್ಲಿ 25, ತೀರ್ಥಹಳ್ಳಿ 17 , ಸೊರಬದಲ್ಲಿ 3, ಸಾಗರದಲ್ಲಿ 10, ಹೊಸನಗರದಲ್ಲಿ 2, ಇತರೆ ಜಿಲ್ಲೆಗಳಿಂದ ಚಿಕಿತ್ಸೆಗೆ ಬಂದಿದ್ದನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.

ADVERTISEMENT

ಆಸ್ಪತ್ರೆ ವೈದ್ಯಾಧಿಕಾರಿಗೆ ಸೋಂಕು

ಶಿಕಾರಿಪುರ ವರದಿ:ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗೆ ಸೇರಿ ತಾಲ್ಲೂಕಿನಲ್ಲಿ 25 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಪಟ್ಟಣದ ಚನ್ನಕೇಶವ ನಗರದಲ್ಲಿ ಪುರುಷ, ಶಿವಮೊಗ್ಗ ರಸ್ತೆ ಚಾನಲ್ ಗೇಟ್ ಸಮೀಪದ ಪುರುಷ, ಉಡುಗಣಿ ಗ್ರಾಮದ ಪುರುಷ, ಗಾಂಧಿನಗರ ಪುರುಷ, ಕಡೇನಂದಿಹಳ್ಳಿ ಪುರುಷ, ಸದಾಶಿವಪುರ ತಾಂಡ ಪುರುಷನಿಗೆ ಸೋಂಕು ತಗುಲಿದೆ.

10 ಜನರಿಗೆ ಪಾಸಿಟಿವ್

ಸಾಗರ ವರದಿ: ತಾಲ್ಲೂಕಿನಲ್ಲಿ ಬುಧವಾರ 10 ಜನರಿಗೆ ಕೊರೊನಾ ಬಂದಿದೆ‌. ಗ್ರಾಮಾಂತರದಲ್ಲಿ 4, ನಗರ ಪ್ರದೇಶದಲ್ಲಿ 6 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 518 ಕ್ಕೆ ಏರಿದ್ದು, 282 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.