ADVERTISEMENT

ಮೆಗ್ಗಾನ್ ಸೇವೆ ಇತರೆ ಮೂರು ಕೇಂದ್ರಗಳಿಗೆ ಸ್ಥಳಾಂತರ

ಮಕ್ಕಳು, ಗರ್ಭಿಣಿಯರ ಪ್ರಕರಣ ಹೊರತುಪಡಿಸಿ ಇಡೀ ಮೆಗ್ಗಾನ್ ಕೋವಿಡ್‌–19 ಪೀಡಿತರ ಚಿಕಿತ್ಸೆಗೆ ಮೀಸಲು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 12:12 IST
Last Updated 27 ಮಾರ್ಚ್ 2020, 12:12 IST
ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ವಹಿವಾಟು.
ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ವಹಿವಾಟು.   

ಶಿವಮೊಗ್ಗ: ಮಕ್ಕಳು ಮತ್ತು ಗರ್ಭಿಣಿಯರ ಪ್ರಕರಣ ಹೊರತುಪಡಿಸಿ, ಮೆಗ್ಗಾನ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್–19 ಪೀಡಿತರ ಆರೈಕೆಗೆ ಮೀಸಲಿಟ್ಟಿರುವ ಪರಿಣಾಮ ಇತರೆ ಹೋರ ರೋಗಿಗಳ ತಪಾಸಣೆಗೆನಗರದ ಮೂರು ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮೆಗ್ಗಾನ್ ಆಸ್ಪತ್ರೆಯ ತಜ್ಞ ವೈದ್ಯರನ್ನುಒಳಗೊಂಡತಂಡವನ್ನೇ ಅಲ್ಲಿಗೆನಿಯೋಜಿಸಲು ಸೂಚಿಸಲಾಗಿದೆ. ಶಸ್ತ್ರಚಿಕಿತ್ಸೆ, ಒಳ ರೋಗಿಗಳಾಗಿ ದಾಖಲಿಸುವ ಅಗತ್ಯ ಇರುವವರಿಗೆ ಸುಬ್ಬಯ್ಯವೈದ್ಯಕೀಯಕಾಲೇಜು ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಆಯುಷ್‌ಮಾನ್ ಭಾರತ್, ಪಿಬಿಎಲ್‌ ಚೀಟಿ ಇರುವ ಕುಟುಂಬಗಳು ಇತರೆ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು.

ಶಿವಮೊಗ್ಗದತುಂಗಾ ನಗರ, ವಿದ್ಯಾನಗರ, ಕೋಟೆ ಆರೋಗ್ಯ ಕೇಂದ್ರಗಳಲ್ಲಿ ಹೊರ ರೋಗಿಗಳ ವಿಭಾಗ ತಕ್ಷಣ ಆರಂಭಿಸಲಾಗುವುದು.ಮಕ್ಕಳ ಮತ್ತು ಗರ್ಭಿಣಿಯರ ಹೊರ ರೋಗಿ ವಿಭಾಗ ಮೆಗ್ಗಾನ್ ಆಸ್ಪತ್ರೆಯನಿಗದಿತ ಕಟ್ಟದಲ್ಲೇ ಮುಂದುವರಿಯಲಿದೆ. ಶಸ್ತ್ರಚಿಕಿತ್ಸೆ, ಒಳ ರೋಗಿಗಳಿಗಾಗಿ ಸುಬ್ಬಯ್ಯವೈದ್ಯಕೀಯಕಾಲೇಜಿನಲ್ಲಿ ಆರೋಗ್ಯ ಮಿತ್ರ ಕೌಂಟರ್ ತೆರೆಯಲಾಗಿದೆ ಎಂದರು.

ADVERTISEMENT

ಕ್ಲಿನಿಕ್ ಬಾಗಿಲು ಮುಚ್ಚದಂತೆ ತಾಕೀತು

ಕೊರೊನಾ ಭೀತಿಯಿಂದ ಜಿಲ್ಲೆಯ ಹಲವು ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ವಿಭಾಗ ಬಂದ್‌ ಮಾಡಿವೆ. ಬಹುತೇಕ ಕ್ಲಿನಿಕ್‌ಗಳು ಬಾಗಿಲು ಮುಚ್ಚಿವೆ.ಎಲ್ಲಾ ಖಾಸಗಿ ಕ್ಲಿನಿಕ್‍ಗಳಲ್ಲೂರೋಗಿಗಳ ಚಿಕಿತ್ಸೆಗೆ ಅವಕಾಶಇರಬೇಕು. ಒಂದಕ್ಕಿಂತ ಹೆಚ್ಚು ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಮೆಗ್ಗಾನ್‍ಗೆ ಕಳುಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನೂ ಕ್ಲಿನಿಕ್‍ಗಳಲ್ಲಿಪಾಲಿಸಬೇಕು. ಅಧಿಕ ದರ ವಸೂಲಿ ಮಾಡಬಾರದು ಎಂದುತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.