ADVERTISEMENT

ವಾಹನದಿಂದ ಜಿಗಿದು ಹಸು ಸಾವು; ಚಾಲಕನ ಮೇಲೆ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:05 IST
Last Updated 9 ಡಿಸೆಂಬರ್ 2025, 5:05 IST
   

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಬ್ರಹ್ಮವರದಿಂದ ಚಿಂತಾಮಣಿಗೆ ಟಾಟಾ ಏಸ್‌ನಲ್ಲಿ ಸಾಗಿಸುತ್ತಿದ್ದ ಐದು ಹಸುಗಳ ಪೈಕಿ ಒಂದು ವಾಹನದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನಪ್ಪಿದ್ದು, ಚಾಲಕನ ನಿರ್ಲಕ್ಷತನ ಹಾಗೂ ಅನುಮತಿ ಇಲ್ಲದೆ ಗೋವು ಸಾಕಾಣಿಕೆ ಸಾಗಾಣಿಕೆ ಮಾಡಿದ ಆರೋಪದಡಿ ಪಿಎಸ್ಐ ರಾಜು ರೆಡ್ಡಿ ಅವರು ಭಾನುವಾರ ಸ್ವಯಂ ದೂರು ದಾಖಲಿಸಿಕೊಂಡು ವಾಹನ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ‍ಪ್ರಕರಣ ದಾಖಲಿಸಿದ್ದಾರೆ

ಬಂಧಿತ ಆರೋಪಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮದ ಅನಿಲ್(27) ಹಾಗೂ ಚಿಂತಾಮಣಿ ಸುರೇಶ್ (30) ಎಂದು ಗುರುತಿಸಲಾಗಿದೆ.

ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಪಿಎಸ್‌ಐ ರಾಜು ರೆಡ್ಡಿ ಹಾಗೂ ಪೋಲಿಸ್ ಸಿಬ್ಬಂದಿ ಅರಸಾಳಿನಲ್ಲಿ ವಾಹನ ತಡೆದು ವಶಕ್ಕೆ ಪಡೆದುಕೊಂಡರು.

ADVERTISEMENT

ಉಳಿದ 4 ಗೋವುಗಳನ್ನು ಗೋಶಾಲೆಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.