ADVERTISEMENT

ಮೊಬೈಲ್ ಟವರ್ ಬ್ಯಾಟರಿ ಕಳವು: 6 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 3:42 IST
Last Updated 16 ಏಪ್ರಿಲ್ 2021, 3:42 IST
ಸೊರಬ ತಾಲ್ಲೂಕಿನ ಮಾವಲಿ ಗ್ರಾಮದಲ್ಲಿರುವ ಜಿಯೊ ಮೊಬೈಲ್ ಟವರ್‌ನಲ್ಲಿ ಬ್ಯಾಟರಿಗಳನ್ನು ಕದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದರು
ಸೊರಬ ತಾಲ್ಲೂಕಿನ ಮಾವಲಿ ಗ್ರಾಮದಲ್ಲಿರುವ ಜಿಯೊ ಮೊಬೈಲ್ ಟವರ್‌ನಲ್ಲಿ ಬ್ಯಾಟರಿಗಳನ್ನು ಕದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದರು   

ಸೊರಬ: ಮೊಬೈಲ್ ಟವರ್‌ನಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳವು ಮಾಡಿದ ಆರು ಆರೋಪಿಗಳನ್ನು ಗುರುವಾರ ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೊರಬದ ಕುದುರೆ ಗಣಿಯಗಣೇಶ, ಹಾವೇರಿಯ ಚಂದ್ರು, ಶಿರಸಿಯ ದೀಪಕ್, ಸಂದೀಪ, ಯುವರಾಜ್, ಉತ್ತರ ಪ್ರದೇಶ ಮೂಲದ ಗುಲ್ಘಾಮ್ ಮಲ್ಲಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಮಾವಲಿ ಗ್ರಾಮದಲ್ಲಿರುವ ಜಿಯೊ ಮೊಬೈಲ್ ಟವರ್‌ನಲ್ಲಿ ಅಳವಡಿಸಿದ್ದ 48 ಬ್ಯಾಟರಿಗಳನ್ನು ಮಂಗಳವಾರ ಕಳವು ಮಾಡಲಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಕಳ್ಳರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಕೈಗೊಂಡಿದ್ದರು.

ADVERTISEMENT

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗುರುವಾರ ಪಟ್ಟಣದ ಕಾನುಕೊಪ್ಪದ ಬಳಿ 2 ಲಗೇಜ್ ಆಟೊದಲ್ಲಿ ಕಳವು ಮಾಡಿ ಸಾಗಿಸುತ್ತಿದ್ದ ಬ್ಯಾಟರಿಗಳ ಸಮೇತ 2 ಲಗೇಜ್ ಆಟೊ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಪಿಐ ಮರುಳಸಿದ್ದಪ್ಪ ಮಾರ್ಗದರ್ಶನದಲ್ಲಿ ಪಿಎಸ್‍ಐ ಟಿ.ಬಿ.ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಎಎಸ್‍ಐ ಶಬ್ಬೀರ್ ಖಾನ್, ಸಿಬ್ಬಂದಿ ದಿನೇಶ್, ಸಂದೀಪ್, ಪ್ರಭಾಕರ್, ಮೋಹನ್, ಉಮೇಶ್, ಶಿವಾಜಿ, ಸಿದ್ದನಗೌಡ, ಮಂಜುನಾಥ್ ದೈವಜ್ಞ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.