ಸಾಗರ: ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್ ಹೇಳಿದರು.
ಇಲ್ಲಿನ ನಗರಸಭೆ ರಂಗ ಮಂದಿರದಲ್ಲಿ ಗೀತಾಂಜಲಿ ಕಲಾ ಕೇಂದ್ರ ಶುಕ್ರವಾರ ಹಮ್ಮಿಕೊಂಡಿದ್ದ ನೃತ್ಯ ಸೌರಭ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೃತ್ಯ, ಸಂಗೀತ, ಸಾಹಿತ್ಯ, ರಂಗಭೂಮಿ ಸೇರಿದಂತೆ ಹಲವು ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಅನೇಕ ಕಲಾವಿದರು ಈ ಭಾಗದಲ್ಲಿದ್ದಾರೆ. ಅವರುಗಳ ನಡುವೆ ಸಾಮರಸ್ಯದ ಭಾವ ಇರುವುದು ಈ ಪ್ರದೇಶದ ವಿಶೇಷತೆಯಾಗಿದೆ ಎಂದರು.
ಯುವ ಸಂಗೀತ ಕಲಾವಿದ ಸಂವತ್ಸರ ಅವರಿಗೆ ‘ಯುವ ಸೌರಭ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೈದರಾಬಾದ್‌ನ ಶ್ರೀನಿಧಿ ವಿಶ್ವವಿದ್ಯಾಲಯದ ನಿರ್ದೇಶಕ ಬಾಲಚಂದ್ರ ಬಿ.ರಾವ್, ರಂಗ ಕಲಾವಿದ ರವಿಶಂಕರ್ ಕೋಳಿವಾಡ, ವಿಜಯಲಕ್ಷ್ಮಿ ಹೆಗಡೆ ಇದ್ದರು.
ಗೀತಾಂಜಲಿ ಕಲಾ ಕೇಂದ್ರದ ಅಧ್ಯಕ್ಷ ಶ್ರೀಪಾದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.