ADVERTISEMENT

ದಲಿತ ಯುವಕನ ಕೊಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 16:18 IST
Last Updated 19 ಆಗಸ್ಟ್ 2024, 16:18 IST
ಸಾಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಕೊಪ್ಪಳ ಜಿಲ್ಲೆಯ ಸಂಗನಾಳ ಗ್ರಾಮದಲ್ಲಿ ಕ್ಷೌರಕ್ಕೆಂದು ಹೋಗಿದ್ದ ದಲಿತ ಯುವಕನನ್ನು ಅವಮಾನಿಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಾಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಕೊಪ್ಪಳ ಜಿಲ್ಲೆಯ ಸಂಗನಾಳ ಗ್ರಾಮದಲ್ಲಿ ಕ್ಷೌರಕ್ಕೆಂದು ಹೋಗಿದ್ದ ದಲಿತ ಯುವಕನನ್ನು ಅವಮಾನಿಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದರು.   

ಸಾಗರ: ಕೊಪ್ಪಳ ಜಿಲ್ಲೆಯ ಸಂಗನಾಳ ಗ್ರಾಮದಲ್ಲಿ ಕ್ಷೌರಕ್ಕೆಂದು ಹೋಗಿದ್ದ ದಲಿತ ಯುವಕನನ್ನು ಅವಮಾನಿಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಇಲ್ಲಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಸೋಮವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಾತಿ ವ್ಯವಸ್ಥೆ ನಾಶವಾಗಿದೆ ಎಂದು ಹೇಳುವವರು ಸಂಗನಾಳ ಗ್ರಾಮದ ಘಟನೆಯನ್ನು ಗಮನಿಸಬೇಕಿದೆ. ಯಮನೂರಪ್ಪ ದಲಿತ ಎಂಬ ಕಾರಣಕ್ಕೆ ಆತನ ವಿರುದ್ಧ ದೌರ್ಜನ್ಯ ನಡೆಸಲಾಗಿದೆ. ದಲಿತರ ರಕ್ಷಣೆಗೆ ಹಲವು ಕಾನೂನುಗಳು ಇದ್ದರೂ ಇಂತಹ ಪ್ರಕರಣ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದರು.

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ನಾಗರಾಜ್, ಪ್ರಮುಖರಾದ ಶಿವಾನಂದ ಕುಗ್ವೆ, ಎಲ್.ಚಂದ್ರಪ್ಪ, ಮೋಹನ್ ಮೂರ್ತಿ, ಮಂಜಪ್ಪ ಹಿರೇನೆಲ್ಲೂರು, ನಾರಾಯಣ ಅರಮನೆಕೇರಿ, ವೀರಭದ್ರ, ರಾಮಣ್ಣ ಹಸಲರು, ಸತೀಶ್, ರವಿ ಜಂಬಗಾರು, ನಾರಾಯಣ ಗೋಳಗೋಡ, ರಂಗಪ್ಪ ಹೊನ್ನೇಸರ, ಶಿವಪ್ಪ ಗುಡ್ಡೆಕೌತಿ, ಈಶ್ವರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.