ಹೊಸನಗರ: ವಿಜಯದಶಮಿ ಅಂಗವಾಗಿ ದೇವರ ಪಲ್ಲಕ್ಕಿ ಮೆರವಣಿಗೆಯು ಯೆಡಚಿಟ್ಟೆ ಗ್ರಾಮದ ಕಳೂರು ರಾಮೇಶ್ವರ ದೇವಸ್ಥಾನದಲ್ಲಿ ಬನ್ನಿ ಮುಡಿಯುವ ಮೂಲಕ ಸಂಪನ್ನಗೊಂಡಿತು.
ತಹಶೀಲ್ದಾರ್ ರಶ್ಮಿ ಎಚ್.ಜೆ ತಾಲ್ಲೂಕು ಕಚೇರಿಯಲ್ಲಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಪಟ್ಟಣದ ವಿವಿಧ ದೇವರ ಪಲ್ಲಕ್ಕಿ ಹಾಗೂ ರಾಜ್ಯದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಜೊತೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಾಮೇಶ್ವರ ದೇವಸ್ಥಾನದಕ್ಕೆ ತೆರಳಿ ಆಲ್ಲಿ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿ, ಬಾಳೆ ಕಂಬವನ್ನು ಕತ್ತರಿಸಲಾಯಿತು.
ಕಲಾತಂಡದ ಮೆರವಣಿಗೆ: ಜೋಡಿತ್ತಿನ ಓಟ, ವೀರಗಾಸೆ, ಡೊಳ್ಳು ಕುಣಿತ, ಮಹಿಷಮರ್ದಿನಿ ಸ್ತಬ್ಧಚಿತ್ರ, ಯಕ್ಷಗಾನ, ತಟ್ಟಿರಾಯ, ಗೊಂಬೆ ಕುಣಿತ, ಕೀಲು ಕುದುರೆ, ಛದ್ಮವೇಷಗಳು ಸಭಿಕರನ್ನು ರಂಜಿಸಿದವು.
ದಸರಾ ಆಚರಣೆ ಸಮಿತಿಯ ಅಧ್ಯಕ್ಷ ಡಿ.ಆರ್. ವಿನಯ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಉತ್ಸವದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಭಾಗಿಯಾಗಿದ್ದರು. ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಶ್ರೀ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಜಿ.ಎನ್, ಪಟ್ಟಣ ಪಂಚಾಯಿತಿ ಸದಸ್ಯ ಸಿಂತಿಯಾ ಸೇರವು, ಶಾಹಿನ ನಾಸಿರ್, ಕೃಷ್ಣವೇಣಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಚಿದಂಬರ ಹೂವಿನ ಕೋಣೆ, ಮುಖ್ಯ ಅಧಿಕಾರಿ ಹರೀಶ್ ಎಂ. ಎನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ, ಬಾಬು ಕಾಮತ್, ಮಂಜು ಸಣ್ಣಕ್ಕಿ, ನಾಸಿರ್, ಮಾಧವ ಶೆಟ್ಟಿ, ಉದಯ್ ಗೌಡ, ಸತೀಶ್ ಬಾವಿಕಟ್ಟೆ, ಚಿರಾಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.