ADVERTISEMENT

ಕುಂಸಿ|ಇನ್ನೋವಾ ಕಾರು ಡಿಕ್ಕಿ: ಗಂಡು ಜಿಂಕೆ ಸಾವು

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 16:20 IST
Last Updated 4 ಜೂನ್ 2023, 16:20 IST

ಕುಂಸಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಂಕೆ ರಸ್ತೆ ದಾಟುವಾಗ ಇನ್ನೋವಾ ಕಾರು ಡಿಕ್ಕಿ ಹೊಡೆದು ಜಿಂಕೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಸಮೀಪದ ಚೋರಡಿ ಬಳಿಯ ಕೆಂಪಿನ ಕೊಪ್ಪ ಕ್ಯಾಂಪ್ ಬಳಿ ಶನಿವಾರ ಸಂಜೆ ಗಂಡು ಜಿಂಕೆ ದೊಡ್ಡಿಮಟ್ಟಿ ಕಾಡಿನಿಂದ ಸೂಡೂರು ಕಾಡಿನ ಕಡೆಗೆ ರಸ್ತೆ ದಾಟುತ್ತಿರುವಾಗ ಶಿವಮೊಗ್ಗ ಕಡೆಯಿಂದ ಬಂದ ಇನ್ನೋವಾ ಕಾರು ಜಿಂಕೆಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT