ADVERTISEMENT

ಜೋಡಿ ಕೊಲೆ ನಂತರ ಅತ್ಯಾಚಾರ ಎಸಗಿದ್ದ ಆರೋಪಿಯ ಬಂಧನ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಮಾಹಿತಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 15:10 IST
Last Updated 21 ಅಕ್ಟೋಬರ್ 2020, 15:10 IST
   

ಶಿವಮೊಗ್ಗ: ಸಾಗರ ತಾಲ್ಲೂಕಿನ ಹಳೇ ಇಕ್ಕೇರಿ ಸಮೀಪದ ಕಸೆಕಸೆಕೊಡ್ಲುವಿನಲ್ಲಿನಡೆದ ತಾಯಿ-ಮಗನ ಜೋಡಿ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ಅ.10ರಂದು ಸಾಗರ ತಾಲ್ಲೂಕಿನ ಕುನ್ನಿಕೋಡುನಲ್ಲಿ ಬಂಗಾರಮ್ಮ (65), ಅವರ ಮಗ ಪ್ರವೀಣ್ (34) ಕೊಲೆಯಾಗಿತ್ತು. ಅಂದು ಕೊಲೆ ಮಾಡಿದ ಆರೋಪಿ ಭರತ್ ಅಂತಹ ಸ್ಥಿತಿಯಲ್ಲೂ ಮೃತ ಪ್ರವೀಣನ ಪತ್ನಿ ಮೇಲೆ ಅತ್ಯಾಚಾರಎಸಗಿದ್ದ. ಇದು ಆರೋಪಿಯ ಕ್ರೂರ ಮನಸ್ಥಿತಿಯ ಪ್ರತಿಬಿಂಬ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಸಾಗರ ಉಪ ವಿಭಾಗ ಡಿವೈಎಸ್ಪಿ ವಿನಾಯಕ ಶೆಟಗೇರಿಯವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಗಳಾದ ಭರತ್ ಮತ್ತು ಶ್ರುತಿ ಎಂಬುವರನ್ನು ಬಂಧಿಸಿದೆ.ಆರೋಪಿ ಭರತ್‌ತಪ್ಪಿಸಿಕೊಳ್ಳಲು ಯತ್ನಿಸಿದ ಪರಿಣಾಮಪೊಲೀಸರುಗುಂಡು ಹಾರಿಸಿದ್ದಾರೆ. ಆರೋಪಿಯ ಬಲಗಾಲಿಗೆ ಪೆಟ್ಟು ಬಿದ್ದಿದ್ದು, ಆತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದರು.

ADVERTISEMENT

ಮತ್ತೊರ್ವ ಆರೋಪಿ ಶ್ರುತಿಯನ್ನೂ ಬಂಧಿಸಲಾಗಿದೆ. ಭರತ್ ಮತ್ತು ಶ್ರುತಿ ಪ್ರೇಮಿಗಳಾಗಿದ್ದರು. ಶ್ರುತಿಯ ಕೆಲವು ಖಾಸಗಿ ವಿಡಿಯೊಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಂಡುಪ್ರವೀಣ್ ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂಬ ಕಾರಣಕ್ಕೆಕೊಲೆ ಮಾಡಲು ಸಂಚು ರೂಪಿಸಿದ್ದರು.ಪ್ರವೀಣ್‌ನನ್ನು ಬಿಡಿಸಲು ಅಡ್ಡ ಬಂದ ತಾಯಿಯೂ ಕೊಲೆಯಾದರು.ನಂತರ ಪ್ರವೀಣನ ಪತ್ನಿಯ ಮೇಲೆ ಅತ್ಯಾಚಾರಎಸಗಿ, ಅವರ ಬಳಿ ಇದ್ದ ₹4 ಸಾವಿರದೋಚಿಪರಾರಿಯಾಗಿದ್ದರುಎಂದು ವಿವರಿಸಿದರು.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದವಿನಾಯಕ ಶೆಟಗೇರಿ, ಕುಮಾರಸ್ವಾಮಿ, ಅಭಯಪ್ರಕಾಶ್, ಉಮೇಶ್, ಭರತ್‌ಕುಮಾರ್‌ ಮತ್ತು ಸಿಬ್ಬಂದಿ ಕಾರ್ಯ ಶ್ಲಾಘಿಸಿದರು.

ಅಪರಾಧ ಚಟುವಟಿಕೆ ನಿಯಂತ್ರಣ:ಜಿಲ್ಲೆಯಲ್ಲಿಅಕ್ರಮ ಚಟುವಟಿಕೆ, ಕಳ್ಳತನ, ಕೊಲೆ, ಜೂಜು, ಗಾಂಜಾ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಜರುಗಿಸಿದೆ. ಹಲವು ಪ್ರಕರಣಗಳನ್ನುಭೇದಿಸಲಾಗಿದೆ. ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಚಿನ್ನ, ಹಣ ವಶಕ್ಕೆ ಪಡೆಯಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಶೇಖರ್, ಸಾಗರ ಡಿವೈಎಸ್ಪಿ ವಿನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.