ADVERTISEMENT

ಆನೆ ಸ್ಥಳಾಂತರ: ಅರಣ್ಯಾಧಿಕಾರಿ ಕಚೇರಿ ಮುಂದೆ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 4:58 IST
Last Updated 28 ನವೆಂಬರ್ 2025, 4:58 IST
ಅರಸಾಳು ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಾಲಪ್ಪ ಹೆಚ್. ಹರತಾಳು ಮಾತನಾಡಿದರು
ಅರಸಾಳು ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಾಲಪ್ಪ ಹೆಚ್. ಹರತಾಳು ಮಾತನಾಡಿದರು   

ರಿಪ್ಪನ್‌ಪೇಟೆ: ಕಳೆದ ಒಂದು ವಾರದಿಂದ ಮಲೆನಾಡಿನ ಅರಸಾಳು, ಬೆಳ್ಳೂರು, ಕೆಂಚನಾಲ, ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಆನೆಗಳ ಹಿಂಡು ರೈತರ ಬೆಳೆ ನಷ್ಟ ಹಾಗೂ ಶಾಲಾ, ಕಾಲೇಜ್ ಸಾರ್ವಜನಿಕರು ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ಅರಸಾಳು ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂದೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ, ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಲಪ್ಪ ಎಚ್. ಹರತಾಳು ಇವರ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಹಾಲಪ್ಪ ಎಚ್. ಹರತಾಳು ಅವರು ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಗಳಿಗೆ ರೈತರ ಕಷ್ಟ - ನಷ್ಟಗಳ ಬಗ್ಗೆ ಅರಿವಿಲ್ಲ. ಬದಲಿಗೆ ಜಿಲ್ಲಾ ಉಸ್ತುವಾರಿ ಸಚಿವರ ಬಾದಾಂಗೋಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಟೀಕಿಸಿದರು.

ಜನಸಾಮಾನ್ಯರೇ ಧ್ವನಿಗೆ ಕೈ ಜೋಡಿಸುವ ಮೂಲತ ಬಿಜೆಪಿ ಸದಾ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಸಿದರು. ಹೋರಾಟದ ಮೂಲಕ ಜಡ್ಡು ಗಟ್ಟಿದ ಆಡಳಿತ ಯಂತ್ರ ಹಾಗೂ ಸರ್ಕಾರ ಕ್ಕೆ ಸಾಣ ಹಿಡಿಯಲಾಗುವುದು ಎಂದರು.

ADVERTISEMENT

ರಾಜ್ಯ ಸರ್ಕಾರ ಅಸ್ತಿತ್ವ ಕಳೆದುಕೊಂಡಿದೆ. ಈಗ ಅಧಿಕಾರಿಗಳದ್ದೆ ಕಾರು ಬಾರು ಎಂದು ಖಾರವಾಗಿ ಮಾತನಾಡಿದರು.

ಆನೆಗಳು ಕಾಡಿನಿಂದ ಹೊರ ಬರದಂತೆ ಇ.ಪಿ.ಟಿ. ನಿರ್ಮಿಸಲು ಅವಕಾಶ ಇದ್ದರು, ಇಲಾಖೆ ನಿರ್ಲಕ್ಷ ವಹಿಸಿದೆ ಎಂದರು.

ಕಳೆದ ವರ್ಷ ಈ ಭಾಗದಲ್ಲಿ ಆನೆ ತುಳಿತಕ್ಕೆ ಒಳಗಾಗಿ ರೈತ ಸಾವನ್ನಪ್ಪಿರುವ ಸಂದರ್ಭದಲ್ಲಿ ಅಮಾಯಕರ ಮೇಲೆ ಇಲಾಖೆಯವರು ಅನಗತ್ಯವಾಗಿ ಕೇಸ್‌ ದಾಖಲಿಸಿದ ಕೇಸ್ ಹಿಂಪ ಡೆಯುವಂತೆ ಆಗ್ರಹಿಸಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಾಡು ಇರುವಷ್ಟೆ ಇದೆ. ಆನೆಗಳ ಸಂತಾನ ಹೆಚ್ಚಾಗಿದೆ. ತಾತ್ಕಾಲಿಕವಾಗಿ ಆನೆಗಳನ್ನು ಓಡಿಸುವ ಕೆಲಸ ಮಾಡಿ ರೈತರ ಬೆಳೆ ಸಂರಕ್ಷಣೆ ಮಾಡಿ ಇನ್ನೂ ಒಂದು ವಾರದೊಳಗೆ ಆನೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಇಲಾಖೆ ಮುಂದಾಗಬೇಕು ಎಂದರು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೂಡಾ ನಮ್ಮ ಅಧಿಕಾರಿವರ್ಗ ಬ್ರಿಟಿಷ್ ಕಾನೂನಿಗೆ ಅಂಟಿಕೊಂಡಿದೆ ಎಂದರು.

1929ರಲ್ಲಿ ನೋಟಿಫಿಕೇಷನ್ ಆಗಿದೆ ಎಂದು ನಮ್ಮ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ನಮಗೆ ಮಾಹಿತಿ ನೀಡುತ್ತಾ ಈ ಜಾಗ ಅರಣ್ಯ ಇಲಾಖೆಗೆ ಸೇರಿದು ಎಂದು ಸಮಜಾಯಿಸಿ ನೀಡುತ್ತಾರೆಂದು ಕೆಂಡ ಕಾರಿದರು.

ಮಾಜಿ ಶಾಸಕ ಬಿ.ಸ್ವಾಮಿರಾವ್ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗಿಯಾಗಿದ್ದರು.


ಬಿಜೆಪಿ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ರಾಜ್ಯ ಜೆಡಿಎಸ್ ಮುಖಂಡ ಆರ್.ಎ.ಚಾಬುಸಾಬ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎನ್.ಸತೀಶ್, ರೈತ ಮುಖಂಡ ಶಿವಾನಂದ, ದಿನೇಶ್ ಸರಸ್ವತಿ, ಬೆಳ್ಳೂರು ತಿಮ್ಮಪ್ಪ, ನಾಗಾರ್ಜುನಸ್ವಾಮಿ ಮತ್ತು ಇತರರು ಹಾಜರಿದ್ದರು.

ವನ್ಯ ಜೀವಿ ವಿಭಾಗದ ಡಿ.ಎಫ್.ಓ, ಅರಣ್ಯ ಇಲಾಖೆಯ ಡಿ.ಎಫ್.ಓ ಹಾಗೂ ಎಸಿಎಫ್ ಹಾಗೂ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿವರ್ಗ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.