ಶಿವಮೊಗ್ಗ: ‘ಮನುಷ್ಯನಿಗೆ ಭಾವೋದ್ವೇಗಕ್ಕಿಂತಲೂ ನಮ್ಮನ್ನೇ ನಾವು ಶೋಧಿಸಿಕೊಳ್ಳುವ ಭಾವಶೋಧ ಮುಖ್ಯ’ ಎಂದು ಡಾ. ಕುಮಾರಚಲ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಬಸವಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ಲೇಟೋನಂತಹ ಗುರು ಅರಿಸ್ಟಾಟಲ್‌ನಂತ ಶಿಷ್ಯ ಇವರಿಬ್ಬರೂ ಪ್ರಖಾಂಡ ಪಂಡಿತರು. ಸಾಹಿತ್ಯದ ಆನಂದ ಎಲ್ಲಿ ಸಿಗುತ್ತದೆ ಎಂದರೆ ಭಾವೋದ್ವೇಗದಲ್ಲಿ ಸಿಗುತ್ತದೆ ಎಂದು ಪ್ಲೆಟೋ ಹೇಳಿದರೆ, ಇದಕ್ಕೆ ವಿರುದ್ಧವಾಗಿ ಭಾವಶೋಧದಿಂದ ಸಾಹಿತ್ಯ ಆನಂದ ಸಿಗುತ್ತದೆ ಎಂದು ಅರಿಸ್ಟಾಟಲ್ ಹೇಳಿದ್ದಾರೆ’ ಎಂದು ತಿಳಿಸಿದರು.
‘ಅಸಹನೆಯಿಂದ ಭಾವೋದ್ವೇಗ ಅದರಿಂದ ಆತಂಕ, ಆತಂಕದಿಂದ ಆಪತ್ತು ಬರುತ್ತದೆ. ಆದ್ದರಿಂದ ಅಸಹನೆ ಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕಾದರೆ ಸಹನೆಯನ್ನು ರೂಢಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಭಾವೋದ್ವೇಗದಿಂದ ಆಚೆ ಜಿಗಿದು ನಮ್ಮ ಮನಸ್ಸನನ್ನು ಮೊದಲು ಶೋಧಿಸಿಕೊಳ್ಳಬೇಕು. ನಮ್ಮ ಮನಸಾಕ್ಷಿಯನ್ನು ಪ್ರಶ್ನಿಸಿಕೊಂಡಾಗ ನಮಗೆ ನಿಜವಾದ ಆನಂದ ಸಿಗುತ್ತದೆ. ವಚನ ಎಂದರೆ ಬರೀ ಮಾತಲ್ಲ. ಪ್ರಮಾಣ, ಆಶ್ವಾಸನೆ, ಭರವಸೆ ಇವೆಲ್ಲವನ್ನೂ ಕ್ರೋಡೀಕರಿಸುತ್ತದೆ. ಒಳ್ಳೆಯದನ್ನು ವರ್ಣಿಸುವಾಗಮಾತು ಹೆಚ್ಚಾಗಲಿ. ಅಲ್ಲದನ್ನುಕಂಡಾಗ ಮಾತು ಕೊಂಚಾಗಲಿ. ನಾವು ನಂಬುವ ತತ್ವಗಳಿಂತ ನಾವು ಬದುಕುವ ರೀತಿ ಮುಖ್ಯ’ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಬಸವ ಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಾಳಿ, ತಹಶೀಲ್ದಾರ್ ಡಾ.ಎನ್.ಜೆ. ನಾಗರಾಜ್ ಭಾಗವಹಿಸಿದ್ದರು. ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.