ADVERTISEMENT

ಸುಳ್ಳು ಮಾಹಿತಿ: ಗ್ರಾಮ ಪಂಚಾಯಿತಿ ಸದಸ್ಯತ್ವ ರದ್ದು

ಗೆದ್ದವನು ಸೋತ. ಸೋತವನು ಗೆದ್ದ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 5:00 IST
Last Updated 1 ಡಿಸೆಂಬರ್ 2021, 5:00 IST
ಎಚ್.ಎನ್. ಗೋಪಾಲ, ಹೀಲಗೋಡು
ಎಚ್.ಎನ್. ಗೋಪಾಲ, ಹೀಲಗೋಡು   

ಹೊಸನಗರ: ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ಹೀಲಗೋಡು ವಾರ್ಡ್ ನಂ. 3ರ ಸದಸ್ಯ ಎಚ್.ವಿ. ಅಶೋಕ ಅವರು ಚುನಾವಣೆಯ ವೇಳೆ ನಾಮಪತ್ರ ಸಲ್ಲಿಸುವಾಗ ಸುಳ್ಳು ಮಾಹಿತಿ ನೀಡಿದ್ದರಿಂದ ಅವರ ಸದಸ್ಯತ್ವವನ್ನು ರದ್ದುಪಡಿಸಿ ಹೊಸನಗರ ಹಿರಿಯ ಸಿವಿಲ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಅಶೋಕ ಅವರು ಕ್ಲಾಸ್ ಒನ್ ಗುತ್ತಿಗೆದಾರರಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದ್ದರೂ ಅದನ್ನು ಮರೆಮಾಚಿದ್ದರು. ಇದನ್ನು ಪ್ರಶ್ನಿಸಿ ಅವರ ಪ್ರತಿಸ್ಪರ್ಧಿ ಎಚ್.ಎನ್. ಗೋಪಾಲ ಹೀಲಗೋಡು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಸುದೀರ್ಘ ವಾದ–ಪ್ರತಿವಾದ ಆಲಿಸಿದ ಹಿರಿಯ ನ್ಯಾಯಾಧೀಶ ರಾದ ಕೆ. ಪುಷ್ಪಲತಾ ಅವರು ಅಶೋಕರವರ ಸದಸ್ಯತ್ವ ಅನರ್ಹ ಎಂದೂ ಮತ್ತು ಕೇವಲ 3 ಮತಗಳ ಅಂತರದಲ್ಲಿ ಸೋತಿದ್ದ ಎಚ್.ಎನ್. ಗೋಪಾಲ ಹೀಲಗೋಡು ಅವರು ಸದಸ್ಯರಾಗಿ ಮುಂದುವರಿಸಬಹುದು ಎಂದೂ ತೀರ್ಪು ನೀಡಿದ್ದಾರೆ.

ಸಾಮಾನ್ಯ ಮೀಸಲು ಕ್ಷೇತ್ರವಾಗಿದ್ದ ಈ ಕ್ಷೇತ್ರಕ್ಕೆ ಕಳೆದ ವರ್ಷ ಡಿಸೆಂಬರ್ 27ರಂದು ಚುನಾವಣೆ ನಡೆದಿತ್ತು. ಅರ್ಜಿದಾರರ ಪರವಾಗಿ ವಕೀಲ ರವೀಶ್ ಸಾಗರ ಮತ್ತು ವೈ.ಪಿ. ಮಹೇಶ್ ವಾದಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.