ADVERTISEMENT

ಫುಟ್‌ಬಾಲ್‌: ಮ್ಯಾಜಿಕ್‌ ಫಿಟ್ ತಂಡಕ್ಕೆ ಪ್ರಥಮ ಸ್ಥಾನ

ರಾಜ್ಯಮಟ್ಟದ ಫುಟ್‌ಬಾಲ್‌ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 26 ಮೇ 2024, 14:22 IST
Last Updated 26 ಮೇ 2024, 14:22 IST
ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಮ್ಯಾಜಿಕ್ ಫಿಟ್ ತಂಡ ಬಹುಮಾನದೊಂದಿಗೆ ಸಂಭ್ರಮಿಸಿತು
ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಮ್ಯಾಜಿಕ್ ಫಿಟ್ ತಂಡ ಬಹುಮಾನದೊಂದಿಗೆ ಸಂಭ್ರಮಿಸಿತು    

ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿ ದಿ. ಸುಂದರ್‌ಸಿಂಗ್‌ ಸ್ಮರಣಾರ್ಥ ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಷನ್‌ ಸಹಯೋಗದೊಂದಿಗೆ ಭಾನುವಾರ 12 ಹಾಗೂ 14 ವರ್ಷದೊಳಗಿನ ರಾಜ್ಯಮಟ್ಟದ ಫುಟ್‌ಬಾಲ್‌ ಪಂದ್ಯಾವಳಿ ನಡೆಯಿತು. 

ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ 12 ತಂಡಗಳು ಭಾಗವಹಿಸಿದ್ದವು. 14 ವರ್ಷದೊಳಗಿನ ಪಂದ್ಯಾವಳಿಯಲ್ಲಿ ಶಿವಮೊಗ್ಗ ಮ್ಯಾಜಿಕ್ ಫಿಟ್ ತಂಡ ಪ್ರಥಮ ಸ್ಥಾನ ಪಡೆಯಿತು. ಚಿತ್ರದುರ್ಗದ ತಂಡ ದ್ವಿತೀಯ ಹಾಗೂ ಚಿಕ್ಕಮಗಳೂರು ತಂಡ ತೃತೀಯ ಸ್ಥಾನ ಪಡೆಯಿತು.

12 ವರ್ಷದೊಳಗಿನ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರು ಫುಟ್ಬಾಲ್ ಅಸೋಸಿಯೇಷನ್ ತಂಡ ಪ್ರಥಮ ಸ್ಥಾನ ಪಡೆಯಿತು. ಶಿವಮೊಗ್ಗದ ಮ್ಯಾಜಿಕ್ ಫಿಟ್‌ ತಂಡ 2ನೇ ಸ್ಥಾನ ಪಡೆಯಿತು. ಶಿವಮೊಗ್ಗದ ಕಾಸ್ಮೋಸ್ ತಂಡಕ್ಕೆ ತೃತೀಯ ಸ್ಥಾನ ಲಭಿಸಿತು. 

ADVERTISEMENT

ಸುಂದರ್ ಸಿಂಗ್ ಅಕಾಡೆಮಿಯ ತರಬೇತುದಾರರಾದ ದೀಪಕ್ ಸಿಂಗ್, ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಿರಿಯ ತರಬೇತುದಾರ ನಾದನ್, ಮ್ಯಾಜಿಕ್ ಫಿಟ್ ಫುಟ್ಬಾಲ್ ತಂಡದ ತರಬೇತುದಾರ ಸುನಿಲ್ ಡಿಸೋಜಾ ಹಾಗೂ ಜೈ ಭಾರತ್ ಎಫ್‌ಸಿ ತಂಡದ ತರಬೇತುದಾರ ರಾಮಣ್ಣ ಪಂದ್ಯಾವಳಿಯ ಉಸ್ತುವಾರಿ ವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.