ADVERTISEMENT

ಗಾಜನೂರು; ಗಾರೆ ಕೆಲಸಗಾರನ ಕೊಲೆ, ಇಬ್ಬರ ಬಂಧನ

-

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 4:52 IST
Last Updated 14 ಫೆಬ್ರುವರಿ 2026, 4:52 IST
ಮಾಲತೇಶ
ಮಾಲತೇಶ   

ಶಿವಮೊಗ್ಗ: ತಾಲ್ಲೂಕಿನ ಗಾಜನೂರಿನ ಸೊಸೈಟಿ ಬಳಿ ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ್ದ ಇಬ್ಬರನ್ನು ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಹೊಸಮನೆ 6ನೇ ಕ್ರಾಸ್‌ನ ಬೋವಿ ಕಾಲೊನಿ ನಿವಾಸಿ, ಗಾರೆ ಕೆಲಸಗಾರ ಶ್ರೀನಿವಾಸ (36) ಎಂಬುವವರನ್ನು ಕೊಲೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜನೂರಿನ ದೊಡ್ಡಕೇರಿ ಬೀದಿ ನಿವಾಸಿ ಬಟ್ಟೆ ಅಂಗಡಿ ಕೆಲಸಗಾರ ಕೃಷ್ಣಮೂರ್ತಿ (44), ಹಾಗೂ ಗಾರೆ ಕೆಲಸಗಾರ ಮಾಲತೇಶ (21) ಎಂಬುವವರನ್ನು ಬಂಧಿಸಲಾಗಿದೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ರಾತ್ರಿ ಮೂವರು ಕುಳಿತು ಕುಡಿದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಶ್ರೀನಿವಾಸನ ಮೇಲೆ ಹಲ್ಲೆ ನಡೆಸಿ ಕಲ್ಲು ಎತ್ತಿಹಾಕಿ, ಕತ್ತಿಯಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತುಂಗಾನಗರ ‍‍ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸನ ಸಹೋದರ ಶ್ರೀಧರ ಪ್ರಕರಣ ದಾಖಲಿಸಿದ್ದರು.

ADVERTISEMENT
ಕೃಷ್ಣಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.