ADVERTISEMENT

ಗಣಪತಿ ಜಾತ್ರೆ: ಉಕ್ಕಿನ ಮೇಲ್ಸೇತುವೆ ನಿರ್ಮಾಣ

ಶಾಸಕ ಎಚ್.ಹಾಲಪ್ಪ ಹರತಾಳು ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 10:11 IST
Last Updated 2 ಮಾರ್ಚ್ 2020, 10:11 IST
ಸಾಗರದಲ್ಲಿ ಮಾರ್ಚ್ 28ರಿಂದ ನಡೆಯಲಿರುವ ಮಹಾಗಣಪತಿ ಜಾತ್ರೋತ್ಸವದ ಅಂಗವಾಗಿ ಶಾಸಕ ಎಚ್.ಹಾಲಪ್ಪ ಹರತಾಳು ಅವರು ಶನಿವಾರ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು
ಸಾಗರದಲ್ಲಿ ಮಾರ್ಚ್ 28ರಿಂದ ನಡೆಯಲಿರುವ ಮಹಾಗಣಪತಿ ಜಾತ್ರೋತ್ಸವದ ಅಂಗವಾಗಿ ಶಾಸಕ ಎಚ್.ಹಾಲಪ್ಪ ಹರತಾಳು ಅವರು ಶನಿವಾರ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು   

ಸಾಗರ: ಇಲ್ಲಿನ ಮಹಾಗಣಪತಿ ದೇವರ ರಥೋತ್ಸವದ ನಂತರ ರಥದಲ್ಲಿರುವ ಗಣಪತಿಯ ಉತ್ಸವ ಮೂರ್ತಿಯನ್ನು ಸಮೀಪದಿಂದ ದರ್ಶನ ಮಾಡಲು ಅವಕಾಶ ಕಲ್ಪಿಸುವ ಸಲುವಾಗಿ ಸ್ಟೀಲ್ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲು ಟೆಂಡರ್ ಕರೆಯುವಂತೆ ಶಾಸಕ ಎಚ್. ಹಾಲಪ್ಪ ಹರತಾಳು ಅಧಿಕಾರಿಗಳಿಗೆ ಸೂಚಿಸಿದರು.

ಮಾರ್ಚ್ 28ರಿಂದ ನಡೆಯಲಿರುವ ಮಹಾಗಣಪತಿ ಜಾತ್ರೋತ್ಸವಅಂಗವಾಗಿ ಶನಿವಾರ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಗಣಪತಿ ಜಾತ್ರೆಯನ್ನು ಮಾರಿಕಾಂಬಾ ಜಾತ್ರೆ ಮಾದರಿಯಲ್ಲೇ ಎಲ್ಲರ ಸಲಹೆ ಪಡೆದು ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ತಿಳಿಸಿದರು.

ಗಣಪತಿ ಜಾತ್ರೆಗೆ ಪ್ರತಿವರ್ಷ ಮುಜರಾಯಿ ಇಲಾಖೆಯಿಂದ ₹ 7 ಲಕ್ಷ ನೀಡಲಾಗುತ್ತಿದೆ. ಮಳಿಗೆ ಹರಾಜು ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಸುಮಾರು ₹ 25 ಲಕ್ಷ ಸಂಗ್ರಹವಾಗುತ್ತಿದೆ. ಈ ಬಾರಿ ಜಾತ್ರೆಗೆ ₹ 25 ಲಕ್ಷ ಅನುದಾನ ನೀಡುವಂತೆ ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ADVERTISEMENT

ಗಣಪತಿ ಜಾತ್ರೆಯಲ್ಲಿ ಸುತ್ತಮುತ್ತಲಿನ ಪರಿಸರವನ್ನು ಚೊಕ್ಕಟವಾಗಿಡುವಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿಗಾ ವಹಿಸಬೇಕು. ಪ್ರತಿವರ್ಷದಂತೆ ಈ ವರ್ಷವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್, ಪೌರಾಯುಕ್ತ ಎಸ್.ರಾಜು, ಮೆಸ್ಕಾಂ ಎಂಜಿನಿಯರ್‌ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.