ತೀರ್ಥಹಳ್ಳಿ: ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ, ನಾರಾಯಣ ಗುರು ವಿಚಾರ ವೇದಿಕೆ ಸಹಯೋಗದಲ್ಲಿ ನಟ ದಿವಂಗತ ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ ಮಾರ್ಚ್ 27ರಂದು ರಾತ್ರಿ 7 ಗಂಟೆಗೆ ಸೊಪ್ಪುಗುಡ್ಡೆ ಸಂಸ್ಕೃತಿ ಮಂದಿರದ ಆವರಣದಲ್ಲಿ ‘ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಇರಲಿದೆ ಎಂದು ಸಂಘದ ಅಧ್ಯಕ್ಷ ಹೊದಲ ಶಿವು ತಿಳಿಸಿದರು.
ಆದಿ ಧೂಮಾವತಿ, ದೇಯಿ ಬೈದತಿ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ಗೆಜ್ಜೆಗಿರಿ ಮೇಳದವರಿಂದ ಪುಣ್ಯ ಕಥಾಭಾಗ ಪ್ರದರ್ಶನಗೊಳ್ಳಲಿದೆ. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಗುವುದು ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಚಾರ ವೇದಿಕೆ ಅಧ್ಯಕ್ಷ ವಿಶಾಲ್ ಕುಮಾರ್, ಪ್ರಮುಖರಾದ ಕುಪ್ಪಳಿ ಸುಧಾಕರ್, ಶ್ರೀಧರ್ ಮಕ್ಕಿಕೊಪ್ಪ, ಶಾಲಿನಿ ನಾಗರಾಜ್, ಸೂರ್ಯನಾರಾಯಣ ಚಿಡುವ, ಗೀತಾ ರಾಘವೇಂದ್ರ, ಶ್ವೇತಾ ಶಬರೀಶ್, ಮಂಜುಳಾ ನಾಗೇಂದ್ರ, ಪ್ರಮೋದ್ ಪೂಜಾರಿ, ಮಂಡಗದ್ದೆ ಪ್ರವೀಣ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.