ADVERTISEMENT

ಸೇವಾ ನ್ಯೂನತೆ: ಫ್ಲಿಪ್‌ಕಾರ್ಟ್‌ಗೆ ₹1 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 11:38 IST
Last Updated 12 ಅಕ್ಟೋಬರ್ 2019, 11:38 IST
   

ಶಿವಮೊಗ್ಗ: ಸೇವಾ ನ್ಯೂನತೆ ಕಾರಣಕ್ಕೆ ಇ ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ಗೆ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ₹1ಲಕ್ಷ ದಂಡ ವಿಧಿಸಿದೆ.

ವಾದಿರಾಜ್ ರಾವ್‌ ಎಂಬುವವರು 2017ರ ಏಪ್ರಿಲ್‌ನಲ್ಲಿ ಫ್ಲಿಪ್‌ಕಾರ್ಟ್‌ ಮೂಲಕ ₹5,999 ಪಾವತಿಸಿ, ಕ್ರಿಕೆಟ್‌ ಬ್ಯಾಟ್‌ ಬುಕ್‌ ಮಾಡಿದ್ದರು. ಕೋರಿಯರ್ ಮೂಲಕ ಬಂದ ಪಾರ್ಸಲ್‌ನಲ್ಲಿ ಕಪ್ಪು ಬಣ್ಣದ ಕೋಟ್‌ ಇಡಲಾಗಿತ್ತು. ಅದನ್ನು ಮರಳಿ ಪಡೆದು ಬ್ಯಾಟ್‌ ನೀಡುವಂತೆ ಮಾಡಿದ ಮನವಿಗೆ ಕಂಪನಿ ಸ್ಪಂದಿಸಿರಲಿಲ್ಲ. ಹಾಗಾಗಿ ಅವರು ವೇದಿಕೆಗೆ ದೂರು ನೀಡಿದ್ದರು.

ದೂರುದಾರರ ಹೇಳಿಕೆ, ದಾಖಲೆಗಳನ್ನು ಪರಿಶೀಲಿಸಿದ ವೇದಿಕೆ ಅಧ್ಯಕ್ಷೆ ಸಿ.ಎಂ.ಚಂಚಲಾ, ಸದಸ್ಯೆ ಎಚ್‌.ಮಂಜುಳಾ ಕಂಪನಿಗೆ ₹1 ಲಕ್ಷ ದಂಡ ವಿಧಿಸಿದ್ದಾರೆ. ಅದರಲ್ಲಿ ₹50 ಸಾವಿರ ಗ್ರಾಹಕ ವಾದಿರಾಜ್ ರಾವ್‌ ಅವರಿಗೆ,₹50 ಸಾವಿರ ಗ್ರಾಹಕರ ಕಲ್ಯಾಣ ನಿಧಿಗೆ ನೀಡುವಂತೆ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ ಸಚಿನ್ ಬನ್ಸಾಲ್ ಅವರಿಗೆ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.