ADVERTISEMENT

ತೀರ್ಥಹಳ್ಳಿ| ಗ್ಯಾರಂಟಿ ಯೋಜನೆಯ ಅಪಪ್ರಚಾರ ಸಲ್ಲ: ಮುಡುಬ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2023, 13:58 IST
Last Updated 10 ಜೂನ್ 2023, 13:58 IST
ಮುಡುಬ ರಾಘವೇಂದ್ರ
ಮುಡುಬ ರಾಘವೇಂದ್ರ   

ತೀರ್ಥಹಳ್ಳಿ: ‘ಬಿಜೆಪಿ ಜನಪರವಾದ ಕಾರ್ಯಕ್ರಮ ರೂಪಿಸಲು ಅಸಮರ್ಥವಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಪುಕ್ಕಟ್ಟೆ ಎನ್ನುವುದರ ಮೂಲಕ ಬಡವರನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುಡುಬ ರಾಘವೇಂದ್ರ ದೂರಿದ್ದಾರೆ.

‘ಸರ್ಕಾರಕ್ಕೆ ಎಲ್ಲಾ ವರ್ಗದ ಜನರು ತೆರೆಗೆ ಪಾವತಿಸುತ್ತಾರೆ. ಅದರಲ್ಲಿ ಕೆಳ, ಮಧ್ಯಮ, ಮೇಲ್ವರ್ಗ ಎಂದು ವಿಂಗಡಣೆ ಮಾಡಲು ಸಾಧ್ಯವಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಒದಗಿಸಿದರೆ ಯಾರು ಮೇಲೂ ಅಲ್ಲ ಕೀಳು ಅಲ್ಲ ಎಂಬುದನ್ನು ಟೀಕಿಸುವ ಬಿಜೆಪಿ ಮನಸ್ಥಿತಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ನೀಡುವುದನ್ನು ಸಹಿಸದ ಮನಸ್ಥಿತಿಗಳು ಅಪಪ್ರಚಾರದಲ್ಲಿ ತೊಡಗಿವೆ. ಸಂವಿಧಾನದ ಆಶಯದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸದೃಢಗೊಳಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಸರ್ಕಾರ ಎಲ್ಲಾ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಜೂನ್‌ 11ರಂದು ಬೆಳಿಗ್ಗೆ 11.30ಕ್ಕೆ ತೀರ್ಥಹಳ್ಳಿಯ ಮುಖ್ಯ ಬಸ್‌ನಿಲ್ದಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.