ಬೆಂಗಳೂರು: ‘ಭದ್ರಾವತಿ ಶಾಸಕರ ಮಗ, ಮಹಿಳಾ ಅಧಿಕಾರಿಗಳಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಬಂಧಿಸದೇ, ಯಾರೋ ಮೂವರನ್ನು ಬಂಧಿಸಿದ್ದಾರೆ. ಇದು ಶಿವಮೊಗ್ಗ ಜಿಲ್ಲೆಯಲ್ಲಿನ ಅರಾಜಕತೆಗೆ ಸಾಕ್ಷಿ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮಹಿಳಾ ಅಧಿಕಾರಿಗೆ ಸಾಂತ್ವನ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.
‘ಈ ಪ್ರಕರಣಕ್ಕೆ ಏನೇನೋ ತಿರುವು ಕೊಡುವ ಪ್ರಯತ್ನ ನಡೆಯುತ್ತಿದೆ. ಕಾಲ್ ರೆಕಾರ್ಡ್ ತೆಗೆಸಿ ಪರಿಶೀಲಿಸಿದರೆ ಕರೆಯ ಎಲ್ಲ ವಿವರಗಳೂ ಲಭಿಸುತ್ತದೆ. ಮಹಿಳಾ ಅಧಿಕಾರಿಗೆ ಬಳಸಿದ ಪದಗಳನ್ನು ಅವರ ಮನೆಯ ಮಹಿಳೆಯರಿಗೆ ಹೇಳಿದ್ದರೆ ಏನಾಗುತ್ತಿತ್ತು. ಅವರು ಸುಮ್ಮನಿರುತ್ತಿದ್ದರೆ? ಮಹಿಳಾ ಅಧಿಕಾರಿಗೆ ಫೋನ್ ಕೊಟ್ಟ ವ್ಯಕ್ತಿ ರಮೇಶನನ್ನು ಬಂಧಿಸಲಾಗಿದೆಯೇ? ಮೊದಲಿಗೆ ರಮೇಶ್ ಹಾಗೂ ಶಾಸಕರ ಮಗನನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.