ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಗುಡುಗು ಸಹಿತ ಜೋರು ಮಳೆ ಸುರಿದಿದ್ದು, ಜನರು ತತ್ತರಿಸಿ ಹೋಗಿದ್ದಾರೆ.
ಗುಡುಗು ಸಹಿತ ಬಿಡುವು ನೀಡದೆ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮೊನ್ನೆಯಷ್ಟೇ ಸುರಿದ ಭಾರಿ ಮಳೆಗೆ ಲಷ್ಕರ್ ಮೊಹಲ್ಲಾದಲ್ಲಿ ಚರಂಡಿಗಳು ಭರ್ತಿಯಾಗಿ, ರಸ್ತೆ ಮೇಲೆ ನೀರು ಹರಿದಿದೆ. ಅಲ್ಲದೇ ಹಲವು ಮನೆಗಳು, ಮಳಿಗೆಯೊಳಗೆ ನೀರು ನುಗ್ಗಿತ್ತು. ಈಗ ಮತ್ತೆ ಮಳೆಯಾಗಿದ್ದು, ಹೊಸಮನೆ ಬಡಾವಣೆ, ಬಾಪೂಜಿನಗರ, ಮಂಡ್ಲಿ ಭಾಗ, ಕುಂಬಾರಗುಂಡಿ ತಗ್ಗುಪ್ರದೇಶದ ಜನರು ಆತಂಕದಲ್ಲಿದ್ದಾರೆ.
ಇನ್ನು ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ತೆಗೆದಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಗುಂಡಿ ಕಾಣದೆ ವಾಹನ ಸವಾರರು ಅಪಘಾತದ ಆತಂಕದಲ್ಲಿದ್ದಾರೆ. ನಗರದ ಪ್ರಮುಖ ರಸ್ತೆಗಳಾದ ಕುವೆಂಪು ರಸ್ತೆ, ಜೈಲ್ ರಸ್ತೆ, ಬಾಲರಾಜ ಅರಸ್ ರಸ್ತೆ, ಸವಳಂಗ ರಸ್ತೆ, ಎಎನ್‌ಕೆ ರಸ್ತೆ, ಅಚ್ಯುತರಾವ್ ಲೇ ಔಟ್, ವೆಂಕಟೇಶ ನಗರ ಸೇರಿ ವಿವಿಧೆಡೆ ಗುಂಡಿ ಅಗೆಯಲಾಗಿದೆ. ಇಲ್ಲೆಲ್ಲ ಸವಾರರು ಆತಂಕದಲ್ಲೇ ವಾಹನ ಚಲಾಯಿಸುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.