ಹೊಸನಗರ: ತಾಲ್ಲೂಕಿನ ಹುಲಿಕಲ್ ಘಾಟಿಯಲ್ಲಿ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ರಸ್ತೆ ಮದ್ಯದಲ್ಲಿ ಲಾರಿಗಳು ನಿಂತ ಪರಿಣಾಮ ಹುಲಿಕಲ್ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿತ್ತು.
ಗುರುವಾರ ಬೆಳಿಗ್ಗೆ 5 ಗಂಟೆಗೆ ಅಪಘಾತ ಸಂಭವಿಸಿದ್ದು, ಘಾಟಿ ಮಾರ್ಗದ ಎರಡು ಕಡೆಯೂ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಬೆಳಿಗ್ಗೆ 5ರಿಂದ 8ಗಂಟೆವರೆಗೂ ಸಂಚಾರ ಬಂದ್ ಆಗಿತ್ತು.
ಹುಲಿಕಲ್ ಚೆಕ್ ಪೋಸ್ಟ್ ಸಮೀಪ ಘಟನೆ ಸಂಭವಿಸಿದೆ. ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಮುಕ್ತಗೊಳಿಸಲು ಕಷ್ಟಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.