ADVERTISEMENT

ಹೊಸನಗರ: ಗೋವರ್ಧನ ಗಿರಿಧಾರಿಯಲ್ಲಿ ಕೃಷ್ಣಾರ್ಪಣಮ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:18 IST
Last Updated 20 ಫೆಬ್ರುವರಿ 2026, 4:18 IST
ಗೋವರ್ಧನ ಗಿರಿಧಾರಿ ದೇಗುಲ
ಗೋವರ್ಧನ ಗಿರಿಧಾರಿ ದೇಗುಲ   

ಹೊಸನಗರ: ತಾಲ್ಲೂಕಿನ ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನ ಗಿರಿಧಾರಿ ದೇವರ ಸನ್ನಿಧಿಯಲ್ಲಿ ಫೆ. 25 ರಂದು ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ, ಗೋದೀಪ ಮಹೋತ್ಸವ, ವಿಷ್ಣು ಸಹಸ್ರನಾಮ ಪಠಣ, ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆ, 
ಲೇಖನ ಯಜ್ಞ ಸಮರ್ಪಣೆ ಸೇರಿದಂತೆ ಗೋಲೋಕ ವರ್ಷ ಸಂಭ್ರಮದ ಕೃಷ್ಣಾರ್ಪಣಮ್ ಕಾರ್ಯಕ್ರಮ ನಡೆಯಲಿದೆ. 

ಅಂದು ಸಂಜೆ ನಡೆಯುವ ಗೋದೀಪ ಮಹೋತ್ಸವ ಬಲು ವಿಶಿಷ್ಟತೆಯನ್ನು ಒಳಗೊಂಡಿದೆ. ಬುಧವಾರದಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿದೆ. ಫೆ.24ರ ವರೆಗೆ ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ಭಾಗವತ ಸಪ್ತಾಹ ಜರುಗಲಿದೆ. ಫೆ. 24 ರಂದು ಗೋಸಂಪದಾಭಿವೃದ್ದಿ, ಕ್ಷೇತ್ರಪುಷ್ಠಿ ಮತ್ತು ಲೋಕಕಲ್ಯಾಣಾರ್ಥ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. 

ಫೆ. 25 ರಂದು ಬೆಳಿಗ್ಗೆ ಶ್ರೀಪೂಜೆ, ಪಾದುಕ ಪೂಜೆ ಮತ್ತು 7 ಗಂಟೆಗೆ ಸೋಪಾನಪೂಜೆ ಹಾಗೂ ಪ್ರತಿಷ್ಠಾ ವರ್ಧಂತಿ ನಡೆಯಲಿದೆ. ನಂತರ ವಿಷ್ಣು ಸಹಸ್ರನಾಮ ಪಾರಾಯಣ, ಛತ್ರ, ಪಾಂಚಜನ್ಯ ಸಮರ್ಪಣೆ, ಗೋವುಗಳಿಗೆ ಗೋಗ್ರಾಸ ಸಮರ್ಪಣೆ ಮತ್ತಿತರ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. 

ADVERTISEMENT

ಸಂಜೆ ಗೋದತ್ತು ದಾನಿಗಳೊಂದಿಗೆ ಸಂವಾದ, ಗೌರವ ಸಮ್ಮಾನ, ಗೋಪೂಜೆ, 1008 ಮಾತೆಯರಿಂದ ಗೋನೀರಾಜನ ಹಾಗೂ ಶ್ರೀಗಳವರಿಂದ ಗೋಸಂದೇಶ ಇರಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.