
ಹೊಸನಗರ: ನಿಟ್ಟೂರು– ಹಸಿರುಮಕ್ಕಿ ಸಂಪರ್ಕ ನೂತನ ಸೇತುವೆ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, 2026ರ ಎಪ್ರಿಲ್ ಅಂತ್ಯಕ್ಕೆ ಉದ್ಘಾಟನೆಗೆ ಸಿದ್ಧವಾಗಲಿದೆ. ಮುಖ್ಯಮಂತ್ರಿಗಳಿಂದ ಸೇತುವೆ ಲೋಕಾರ್ಪಣೆ ಆಶಯ ಇದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಆಶಯ ವ್ಯಕ್ತಪಡಿಸಿದರು.
ತಾಲ್ಲೂಕಿನ ನಿಟ್ಟೂರು ಕಾಂಗ್ರೆಸ್ ಘಟಕದ ಕಾರ್ಯಕರ್ತರ ಸಭೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಭಾಗದ ಅಭಿವೃದ್ಧಿಗೆ ₹ 6 ಕೋಟಿ ಅನುದಾನ ನೀಡಿದ್ದು, ರಸ್ತೆ ಅಭಿವೃದ್ಧಿಗಾಗಿ ₹ 3 ಕೋಟಿ ಅನುದಾನ ನೀಡಲಾಗಿದೆ. 2024–25ನೇ ಸಾಲಿನ ರೈತರ ಬೆಳೆ ವಿಮೆ ಪರಿಹಾರದಲ್ಲಿ ಆಗಿರುವ ತಾರತಮ್ಯ ಕುರಿತು ಚಳಿಗಾಲದ ಅಧಿವೇಶದಲ್ಲಿ ಚರ್ಚೆ ನಡೆಸುವ ಭರವಸೆ ವ್ಯಕ್ತಪಡಿಸಿದರು.
‘ಕಾರ್ಯಕರ್ತರು ಧೈರ್ಯದಿಂದ ಪಕ್ಷದೊಂದಿಗೆ ಕೈ ಜೋಡಿಸಬೇಕು. ನಿಮ್ಮೊಂದಿಗೆ ನಾನಿದ್ದೇನೆ. ನನ್ನ ಮನೆಯ ಬಾಗಿಲು ಪಕ್ಷದ ಕಾರ್ಯಕರ್ತರಿಗೆ ಸದಾ ತೆರೆದಿರುತ್ತದೆ. ನಿಮ್ಮ ಸಂಕಷ್ಟದಲ್ಲಿ ನಾನು ಸದಾ ಭಾಗಿಯಾಗುತ್ತೇನೆ. ಕಾರ್ಯಕರ್ತರು ಯಾವುದೇ ಸಮಯದಲ್ಲೂ ನನಗೆ ಕರೆ ಮಾಡಿದರೂ ನಿಮ್ಮ ಕರೆಯನ್ನು ಸ್ವೀಕರಿಸುತ್ತೇನೆ’ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಲು ಕಾರ್ಯಕರ್ತರಿಗೆ ತಿಳಿಸಿದರು.
ಶಾಸಕರು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಹಿಂದೆಂದೂ ಕಾಣದಷ್ಟು ಅನುದಾನ ನೀಡಿದ್ದಾರೆ. ಯಾವೊಬ್ಬ ಪಕ್ಷದ ಕಾರ್ಯಕರ್ತ ಕಷ್ಟ ಎಂದು ಮನೆ ಬಾಗಿಲಿಗೆ ಹೋದರೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನಿಟ್ಟೂರು ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ಹೇಳಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಸತೀಶ್ ಭಟ್ ಮತ್ತು ರಾಮಪ್ಪ ಪಕ್ಷ ಸೇರ್ಪಡೆಗೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಗೋಡಿ ವಿಶ್ವನಾಥ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ, ಕಾರ್ಯದರ್ಶಿ ಚಂದಯ್ಯ ಜೈನ್, ಪ್ರಮುಖರಾದ ಕೂಡ್ಲುಕೊಪ್ಪ ಸುರೇಶ್, ಘಟಕದ ಪ್ರಧಾನ ಕಾರ್ಯದರ್ಶಿ ಗಣಪತಿ ಜಾಲ, ಕಾರ್ಯಧ್ಯಕ್ಷ ರವೀಂದ್ರ ಚೆನ್ನಪ್ಪ ಮತ್ತು ಮಂಜಪ್ಪ ಬೆನ್ನಟ್ಟೆ, ಗ್ರಾಮ ಪಂಚಾಯಿತಿ ಸದಸ್ಯೆ ಶೋಭಾ ಉದಯ್, ರಾಘವಾಚಾರ್ ಕೆ.ಬಿ. ಸರ್ಕಲ್, ಪರಮೇಶ್ವರ ಕೂಡ್ಲುಕೊಪ್ಪ, ಕೊಲ್ಲಪ್ಪ ಕರ್ಕಮಡಿ, ಗಣಪತಿ ಗುರುಟೆ, ನಿಟ್ಟೂರು ಯುವ ಘಟಕದ ಅಧ್ಯಕ್ಷ ಮಂಜುನಾಥ್ ಶೆಟ್ಟಿ. ಪಿ.ಆರ್. ನಾಗರಾಜ್, ಜೆ.ವಿ. ಸುಬ್ರಹ್ಮಣ್ಯ, ರವೀಶ್ ಕುಮಾರ್, ಗುರುಮೂರ್ತಿ ಬೆನ್ನಟ್ಟೆ, ವಾಸುಭಟ್ ಹೆಬ್ಬಿಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.