ಶಿವಮೊಗ್ಗ: ‘ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಪಾಲ ಗೌಡ ಬಡಾವಣೆ ‘ಸಿ’ ಬ್ಲಾಕ್ ನಲ್ಲಿ ನಡೆದಿದ್ದ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ಕಳುವಾಗಿದ್ದ ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಗೋಪಾಳದ ವಿಶ್ವೇಶ್ವರನಗರದ ಆಟೋ ಚಾಲಕ ಅಶ್ರಫ್ ವುಲ್ಲಾ (35) ಬಂಧಿತ ಆರೋಪಿ.
ಸೆ.17 ರಂದು ಮನೆಗಳ್ಳತನ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎ. ಜಿ. ಕಾರಿಯಪ್ಪ, ರಮೇಶ ಕುಮಾರ್ ಹಾಗೂ ಪೊಲೀಸ್ ಉಪಾಧೀಕ್ಷಕ ಬಾಬು ಆಂಜನಪ್ಪ ಅವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿ.ಐ ಕೆ. ಟಿ. ಗುರುರಾಜ್, ಸಿಬ್ಬಂದಿ ಹೆಚ್. ಸಿ. ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ರಂಗನಾಥ್, ಎಂ.ಜಿ ಹರೀಶ್, ಅನುಷಾ, ಚೈತ್ರಾ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ಎಚ್.ಸಿ ಇಂದ್ರೇಶ, ಗುರು, ವಿಜಯ, ಚಾಲಕ ಎ.ಹೆಚ್.ಸಿ ಪುನೀತ್ ಕಾರ್ಯಚರಣೆಯಲ್ಲಿ ಕಾರ್ಯಾಚರಣೆಯಲ್ಲಿ ಇದ್ದರು.
ಆರೋಪಿಯಿಂದ ₹11.70 ಲಕ್ಷ ಮೌಲ್ಯದ 130 ಗ್ರಾಂ ಬಂಗಾರದ ಆಭರಣ ಮತ್ತು ₹65,000 ಮೌಲ್ಯದ 550 ಗ್ರಾಂ ಬೆಳ್ಳಿಯ ಆಭರಣ ಸೇರಿ ಒಟ್ಟು ₹12.35 ಬಂಗಾರ ಮತ್ತು ಬೆಳ್ಳಿಯ ಆಭರಣ ಮತ್ತು ₹22,74,500 ನಗದು ವಶಕ್ಕೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.