ADVERTISEMENT

ಹಲ್ಕೆ–ಮುಪ್ಪಾನೆ ಲಾಂಚ್ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 5:35 IST
Last Updated 12 ಜೂನ್ 2022, 5:35 IST
ಕರೂರು ಹೋಬಳಿಯಿಂದ ಕಾರ್ಗಲ್ -ಜೋಗಕ್ಕೆ ಸಂಪರ್ಕ ಕಲ್ಪಿಸುವ ಹಲ್ಕೆ-–ಮುಪ್ಪಾನೆ ಲಾಂಚ್
ಕರೂರು ಹೋಬಳಿಯಿಂದ ಕಾರ್ಗಲ್ -ಜೋಗಕ್ಕೆ ಸಂಪರ್ಕ ಕಲ್ಪಿಸುವ ಹಲ್ಕೆ-–ಮುಪ್ಪಾನೆ ಲಾಂಚ್   

ತುಮರಿ:ಕರೂರು ಹೋಬಳಿಯಿಂದ ಕಾರ್ಗಲ್ -ಜೋಗಕ್ಕೆ ತ್ವರಿತವಾಗಿ ಸಂಪರ್ಕ ಕಲ್ಪಿಸುವ ಹಲ್ಕೆ-ಮುಪ್ಪಾನೆ
ಲಾಂಚ್ ಮಾರ್ಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಶರಾವತಿ ಹಿನ್ನೀರಿನಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ.ಈಚೆಗೆ ಲಾಂಚ್ ಸಂಚಾರದ ವೇಳೆ ಲಾಂಚ್ ಬಾಟಮ್‌ಗೆ ಮರದ ದಿಮ್ಮಿಗಳು ಬಡಿದು ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಮುಂಜಾಗ್ರತೆಯ ಕ್ರಮವಾಗಿ ಹಾಗೂ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.ಈ ಭಾಗದಲ್ಲಿ ಮುಂಗಾರು ಇನ್ನೂ ಪ್ರಾರಂಭವಾಗಿಲ್ಲ.ವಾಡಿಕೆ ಮಳೆ ಸರಿಯಾಗಿ ಆಗಿಲ್ಲ. ಹೀಗಾಗಿ ನೀರಿನ ಪ್ರಮಾಣ ಆಧರಿಸಿ ಲಾಂಚ್ ಸೇವೆ ನೀಡಲಾಗುವುದು ಎಂದು ಕಡವು ನಿರೀಕ್ಷಕಧನೇಂದ್ರ ತಿಳಿಸಿದರು.

ಸದ್ಯ ಶರಾವತಿ ಎಡದಂಡೆಯ ತುಮರಿ, ಮಾರಲಗೋಡು, ಬ್ಯಾಕೋಡು ಭಾಗದ ತುರ್ತು ಆರೋಗ್ಯ ಸೇವೆ ಸೇರಿ ಜೋಗ–ಕಾರ್ಗಲ್‌ಗೆ ಹೋಗುವವರು ಮುಪ್ಪಾನೆ ಲಾಂಚ್ ಮಾರ್ಗಅವಲಂಬಿಸಿದ್ದಾರೆ. ಹೊಳೆಬಾಗಿಲು ಲಾಂಚ್‌ನಲ್ಲಿ ಪ್ರತಿನಿತ್ಯ ಜನದಟ್ಟಣೆ ಇರುವ ಕಾರಣ ಈ ಭಾಗದ ಸ್ಥಳೀಯರು ಈ ಸುಗಮ ಸಂಚಾರಕ್ಕೆ ಈ ಮಾರ್ಗದ ಮೊರೆ
ಹೋಗಿದ್ದರು. ಇದು ಸ್ಥಗಿತಗೊಂಡಿರುವುದರಿಂದ ಈ ಭಾಗದ ಜನರಿಗೆ ತೊಂದರೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.