ADVERTISEMENT

ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ: ಡಿಸಿ

ಚುನಾವಣೆ ಸಿದ್ಧತೆಗೆ ಕ್ರಮ: ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 5:28 IST
Last Updated 30 ಮಾರ್ಚ್ 2023, 5:28 IST
ಡಾ.ಆರ್.ಸೆಲ್ವಮಣಿ
ಡಾ.ಆರ್.ಸೆಲ್ವಮಣಿ   

ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆಯ ಘೋಷಣೆಯಾಗಿರುವ ಕಾರಣ ಬುಧವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 14,58,680 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 7,22,080 ಪುರುಷ, 7,36,574 ಮಹಿಳೆ, 14,773 ಅಂಗವಿಕಲರು, 26 ಇತರೆ ಮತದಾರರಿದ್ದಾರೆ. ಏಪ್ರಿಲ್‌ 13ರಿಂದ 20ರವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ಇದೆ.

ಏ.21ರಂದು ನಾಮಪತ್ರ ಪರಿಶೀಲಿಸಲಾಗುವುದು. ನಾಮಪತ್ರವನ್ನು ಹಿಂಪಡೆಯಲು ಏ.24 ಕಡೆಯ ದಿನವಾಗಿದೆ. ಮೇ‌ 10ರಂದು ಮತದಾನ ನಡೆಯಲಿದೆ. ಮೇ 13ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಒಟ್ಟು 1775 ಮತಗಟ್ಟೆಗಳಿವೆ. ಶಿವಮೊಗ್ಗ ಗ್ರಾಮಾಂತರ–247, ಭದ್ರಾವತಿ-253, ಶಿವಮೊಗ್ಗ-282, ತೀರ್ಥಹಳ್ಳಿ-258, ಶಿಕಾರಿಪುರ-232, ಸೊರಬ-239, ಸಾಗರ-264 ಮತಗಟ್ಟೆಗಳಿವೆ.

ಚುನಾವಣೆ ವಿದ್ಯುನ್ಮಾನಮತಯಂತ್ರ ಬಳಸಲಾಗುತ್ತಿದೆ. ಜಿಲ್ಲೆಯಲ್ಲಿ 3,350 ಬ್ಯಾಲೆಟ್ ಯೂನಿಟ್‍ಗಳು, 2,352 ಕಂಟ್ರೋಲ್ ಯೂನಿಟ್ ಹಾಗೂ 2417 ವಿವಿ ಪ್ಯಾಟ್ ಬಳಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಚುನಾವಣಾ ದಿನದಂದು ಕಾರ್ಯನಿರ್ವಹಿಸಲು 8,520 ಅಧಿಕಾರಿಗಳ ಅವಶ್ಯಕತೆ ಇದೆ. ಈಗಾಗಲೇ 10,700 ಸಿಬ್ಬಂದಿ ಮಾಹಿತಿ ಸಂಗ್ರಹಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಏಪ್ರಿಲ್ 20ರವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೆ ಆವಕಾಶ ಇದೆ. ನಮೂನೆ 8 ರಲ್ಲಿ ತಿದ್ದುಪಡಿಗೆ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 36 ಕಡೆ ಚೆಕ್‍ಪೋಸ್ಟ್‌‌ಗಳನ್ನು ಸ್ಥಾಪಿಸಲಾಗುತ್ತಿದೆ. 7 ಚೆಕ್‍ಪೋಸ್ಟ್ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಚುನಾವಣೆಗೆ 6 ಸಿಆರ್‌ಪಿಎಫ್ ತಂಡಗಳು ಬರಲಿವೆ. ಸ್ಟ್ರಾಂಗ್ ರೂಂ, ಮತ ಎಣಿಕೆ ಕೇಂದ್ರಗಳಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ 55 ಜನರಿಗೆ ಗಡೀಪಾರು ಆದೇಶ ಮತ್ತು 5-6 ತಿಂಗಳಿಂದ 6 ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆಗೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ವಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದರು.

ಸೆಕ್ಟರ್ ಆಫೀಸರ್-166, ಅಕೌಂಟಿಂಗ್ ತಂಡ-7, ಫ್ಲೈಯಿಂಗ್ ಸ್ಕ್ವಾಡ್-44, ಸ್ಟಾಟಿಕ್ ಸರ್ವೆಲೆನ್ಸ್ ತಂಡ-36, ಎಂಸಿಸಿ-7, ವಿಡಿಯೊ ಸರ್ವೆಲೆನ್ಸ್ ತಂಡ-44, ವಿಡಿಯೊ ವ್ಯೂವಿಂಗ್ ತಂಡ-7 ಸೇರಿದಂತೆ ವಿವಿಧ ತಂಡಗಳ ರಚಿಸಲಾಗಿದೆ ಎಂದರು.

ಮತದಾರರು 1950 ಸಹಾಯವಾಣಿ ಸಂಪರ್ಕಿಸಬಹುದು. ಶಿವಮೊಗ್ಗ ಗ್ರಾಮಾಂತರ-08182-200508, ಭದ್ರಾವತಿ-08282-263466, ಶಿವಮೊಗ್ಗ- 08182-277906, ತೀರ್ಥಹಳ್ಳಿ-08181-200925, ಶಿಕಾರಿಪುರ- 08187-222239., ಸೊರಬ- 08184-272241., ಸಾಗರ-08183-226601 ಸಂಪರ್ಕಿಸಬಹುದು ಎಂದರು. ಎಡಿಸಿ ಎಸ್.ಎಸ್. ಬಿರಾದಾರ್ ಇದ್ದರು.

ನೋಡಲ್ ಅಧಿಕಾರಿಗಳ ನೇಮಕ

ಚುನಾವಣೆಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾನೂನು ಮತ್ತು ಸುವ್ಯವಸ್ಥೆ, ವಿಎಂ ಮತ್ತು ಭದ್ರತೆ ನೋಡಲ್ ಅಧಿಕಾರಿಯಾಗಿ ಎಸ್ಪಿ ಜಿ.ಕೆ.ಮಿಥನ್ ಕುಮಾರ್– 9480803301.

ಸ್ವೀಪ್‌ ಮತ್ತು ಎಂಸಿಸಿಗೆ ಜಿ.ಪಂ. ಸಿಇಒ ಎನ್.ಡಿ.ಪ್ರಕಾಶ್– 9480876000. ಸಾಮಗ್ರಿ ನಿರ್ವಹಣೆಗೆ ಚಿದಾನಂದ ವಟಾರೆ– 9591419817. ತರಬೇತಿ ನಿರ್ವಹಣೆಗೆ ಶಿವಕುಮಾರ್ ಕೆ.ಎಚ್.–9448357490, ಜಿ.ಸಿ.ಪೂರ್ಣಿಮ‌ 8277932600, ವೆಚ್ಚ ಮೇಲ್ವಿಚಾರಣೆ ಜಿ.ಪ್ರಶಾಂತ ನಾಯಕ್– 9480876003. ಇವಿಎಂ ನಿರ್ವಹಣೆ ನಾರಾಯಣಸ್ವಾಮಿ–9448895836. ದೂರು ಪರಿಹಾರ ಮತ್ತು ವೋಟರ್ ಹೆಲ್ಪ್‌ಲೈನ್‍ಗೆ ಅವಿನ್ ಆರ್. –9886907455. ಮ್ಯಾನ್‍ ಪವರ್ ಮ್ಯಾನೇಜ್‍ಮೆಂಟ್ ಮಹೇಶ್ವರ್–9485963165, ಎನ್.ತಾರಾ– 9480876005.

ಸಾರಿಗೆ ನಿರ್ವಹಣೆ ಗಂಗಾಧರ ಜಿ.ಪಿ.– 944864014.

ಗಣಕೀಕರಣ, ಸೈಬರ್ ಭದ್ರತೆ ಮತ್ತು ಐಟಿ ವೆಂಕಟೇಶ್ ಬೆಣಕಟ್ಟಿ– 9242413050. ಬ್ಯಾಲಟ್ ಪೇಪರ್, ಪೋಸ್ಟಲ್ ಬ್ಯಾಲಟ್, ಇಟಿಪಿಬಿಎಸ್‍ ಕರಿ ಭೀಮಣ್ಣನವರ್– 9980125449., ಮೀಡಿಯಾ ಅಧಿಕಾರಿ ಡಿ.ಟಿ.ಮಂಜುನಾಥ–8277932601.

ಕಮ್ಯುನಿಕೇಷನ್ ಪ್ಲಾನಿಂಗ್‍ಗೆ ಎಸ್.ಜಿ.ಶ್ರೀನಿವಾಸ–9480843044.

ಎಲೆಕ್ಟೊರೊಲ್ ರವಿಚಂದ್ರ ನಾಯ್ಕ್–9916821123.

ಅಬ್ಸರ್ವರ್ಸ್ ಸಂಪತ್ ಕುಮಾರ್ ಪಿಂಗಳೆ ಎಂ.–9986843601

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.