ಕಾರ್ಗಲ್: ಶರಾವತಿ ಕೊಳ್ಳದ ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂತೋಷ ಸಂಭ್ರಮದಿಂದ ನಾಗರಿಕರು ಆಚರಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಡಿಯಲ್ಲಿ ತಹಶೀಲ್ದಾರ್ ಚಂದ್ರಶೇಖರ ನಾಯ್ಕ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಹಿರಿಯರ ತ್ಯಾಗ ಮತ್ತು ಬಲಿದಾನದಿಂದ ದೊರೆತಿರುವ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಕೆಪಿಸಿ ಮುಖ್ಯ ಎಂಜಿನಿಯರ್ ಜಿ.ಇ.ಮೋಹನ್, ಪಟ್ಟಣ ಪಂಚಾಯಿತಿಯ ಚುನಾಯಿತ ಸದಸ್ಯರು, ಶಾಲಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಕರು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಕೆಪಿಸಿ ಮುಖ್ಯ ಎಂಜಿನಿಯರ್ ಕಚೇರಿ ಆವರಣದಲ್ಲಿ ಜಿ.ಇ. ಮೋಹನ್ ಧ್ವಜಾರೋಹಣ ನಡೆಸಿದರು. ಕೆಪಿಸಿ ಮಹಿಳಾ ಸಮಾಜದಲ್ಲಿ ಪುಷ್ಪಾ ಮಹಾದೇವ ಧ್ವಜಾರೋಹಣ ನೆರವೇರಿಸಿದರು.
ಎಂಪ್ಲಾಯಿಸ್ ಯೂನಿಯನ್ ಆವರಣದಲ್ಲಿ ಅಧ್ಯಕ್ಷ ಕೆ.ವೀರೇಂದ್ರ ಧ್ವಜಾರೋಹಣ ಮಾಡಿದರು. ಪರಿಶಿಷ್ಟ ಜಾತಿ ವರ್ಗದ ನೌಕರರ ಸಂಘದ ಆವರಣದಲ್ಲಿ ಅಧ್ಯಕ್ಷೆ ಯಲ್ಲಮ್ಮ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಟಿ. ಸುರೇಶ್, ಶರಾವತಿ ಗೂಡ್ಸ್ ವಾಹನ ಸಂಘದ ಆವರಣದಲ್ಲಿ ಹಿರಿಯ ಚಾಲಕ ಪ್ರಭು, ಆಟೋ ಚಾಲಕರ ಸಂಘದ ಆವರಣದಲ್ಲಿ ರಾಮಚಂದ್ರನ್, ವರ್ತಕರ ಸಂಘದ ಆವರಣದಲ್ಲಿ ಪಾರ್ಶ್ವನಾಥ ಜೈನ್, ಶರಾವತಿ ವಾಹನ ಚಾಲಕರ ಸಂಘದ ಆವರಣದಲ್ಲಿ ಹಿರಿಯ ಚಾಲಕ ಗೋಪಾಲ ಕೃಷ್ಣ ಧ್ವಜಾರೋಹಣ ನೆರವೇರಿಸಿದರು.
ಶರಾವತಿ ವಾಹನ ಚಾಲಕರ ಸಂಘದ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಟ್ರಾಕ್ಟರ್ ಚಾಲಕ ಗೋಪಾಲ ಕೃಷ್ಣ ಮತ್ತು ಕೊರೊನಾ ಬಾಧಿತ ಸಮಯದಲ್ಲಿ ಮತ್ತು ಮಳೆಗಾಲದಲ್ಲಿ ವಿಶೇಷವಾಗಿ ಸೇವೆ ನೀಡಿದ ಮೆಸ್ಕಾಂ ಲೈನ್ ಮ್ಯಾನ್ ಸಂಗಮೇಶ್ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.