
ಶಿವಮೊಗ್ಗ: ನವದೆಹಲಿಯ ಏಮ್ಸ್ ವತಿಯಿಂದ ಈಚೆಗೆ ನಡೆದ ಐಎನ್ಐಎಸ್ಎಸ್‌ಡಿಎಂ ಪ್ರವೇಶ ಪರೀಕ್ಷೆಯಲ್ಲಿ (ಡಿ.ಎಂ– ಕಾರ್ಡಿಯಾಲಜಿ) ಡಾ.ರವೀಶ್ ಸುರೇಶ್ ಬನ್ನಿಹಟ್ಟಿ ಅವರು ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ರವೀಶ್ ಅವರು ಭದ್ರಾವತಿ ತಾಲ್ಲೂಕಿನ ಹೊಸಹಳ್ಳಿಯವರು. ಏಮ್ಸ್, ನಿಮ್ಹಾನ್ಸ್ ಸೇರಿ ದೇಶದ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಡಿ.ಎಂ (ಡಾಕ್ಟರ್ ಆಫ್ ಮೆಡಿಷಿನ್) ಹಾಗೂ ಎಂಸಿಎಚ್ (ಸೂಪರ್ ಸ್ಪೆಷಾಲಿಟಿ) ಕೋರ್ಸ್‌ಗಳ ಪ್ರವೇಶಕ್ಕೆ ಈ ಪರೀಕ್ಷೆ ನಡೆಸಲಾಗುತ್ತದೆ.
ಮೈಸೂರಿನ ಯಾದವಗಿರಿಯ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಹಾಗೂ ಪಿಯು ಶಿಕ್ಷಣ ಪಡೆದಿದ್ದ ಇವರು 2016ರಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದರು. ನಂತರ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದರು.
ಐಎನ್ಐ -ಸಿಇಟಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 7ನೇ ರ್‍ಯಾಂಕ್ ಪಡೆದಿದ್ದ ಇವರು ಚಂಡೀಗಢದ ಪಿಜಿಐಎಂಇಆರ್‌ನಲ್ಲಿ ಇಂಟರ್ನಲ್ ಮೆಡಿಷನ್‌ನಲ್ಲಿ ಎಂ.ಡಿ ವ್ಯಾಸಂಗ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.