ADVERTISEMENT

ಶಿವಮೊಗ್ಗ: ಇನ್‌ಸ್ಪೆಕ್ಟರ್ ಫೇಸ್‌‌ಬುಕ್ ಖಾತೆ‌ ಹ್ಯಾಕ್, ಹಣಕ್ಕೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 4:07 IST
Last Updated 27 ಆಗಸ್ಟ್ 2020, 4:07 IST

ಶಿವಮೊಗ್ಗ: ಸಾಗರ ಗ್ರಾಮಾಂತರ ಸಿಪಿಐ ಸುನೀಲ್‌ ಕುಮಾರ್ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿರುವ ವಂಚಕರುತುರ್ತು ಆವಶ್ಯಕತೆ ಇದ್ದು, ತಮ್ಮ ಖಾತೆಗೆ ಹಣ ಜಮೆ ಮಾಡಿ ಎಂದು ಬುಧವಾರ ಅವರಸ್ನೇಹಿತರಿಗೆ ಸಂದೇಶ ಕಳುಹಿಸಿದ್ದಾರೆ.

ಸಿಪಿಐ ಅವರಿಗೆ ಏನೋ ತುರ್ತು ಇರಬಹುದು ಎಂದು ಕೆಲವರು ಹಣ ಹಾಕಲು ವಿಚಾರಿಸಿದ್ದಾರೆ. ಸಂದೇಶ ಹಿಂದಿಯಲ್ಲಿ ಇದ್ದ ಕಾರಣ ಅನುಮಾನಗೊಂಡ ಹಲವು ಸ್ನೇಹಿತರು ಪರಿಶೀಲಿಸಿದಾಗ ಖಾತೆ ಹ್ಯಾಕ್‌ ಆಗಿರುವ ಸತ್ಯ ಬಯಲಾಗಿದೆ. ತಕ್ಷಣ ಎಲ್ಲರಿಗೂ ವಾಸ್ತವಾಂಶ ತಿಳಿಸಲಾಗಿದೆ.

‘ಫೇಸ್‌ಬುಕ್ ಖಾತೆ ಹ್ಯಾಕ್‌ ಮಾಡಿ ಹಣದ ಬೇಡಿಕೆಯ ಸಂದೇಶ ಕಳುಹಿಸಿದ್ದಾರೆ ಎಂದು ಇನ್‌ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ. ಪ್ರಕರಣ ಪರಿಶೀಲಿಸಲಾಗುತ್ತಿದೆ’ ಎಂದು ಜಿಲ್ಲಾ ಅಪರಾಧ ತನಿಖಾ ವಿಭಾಗದ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ ಕರ್ಕಿ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.