ADVERTISEMENT

ಜಿಲ್ಲೆಯ ಇಂಟರ್‌ನೆಟ್‌ ಸಮಸ್ಯೆ ಶೀಘ್ರ ಮುಕ್ತಿ

ವಿವಿಧ ಕಂಪನಿಗಳ 120 ಟವರ್‌ಗಳ ಸ್ಥಾಪನೆಗೆ ಕ್ರಮ: ಸಂಸದ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 18 ಮೇ 2020, 13:58 IST
Last Updated 18 ಮೇ 2020, 13:58 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮೊಬೈಲ್ ಟವರ್‌ಗಳ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ಮಲೆನಾಡು ಭಾಗಗಳು ಸೇರಿದಂತೆ ಜಿಲ್ಲೆಯಹಲವುಭಾಗಗಳಲ್ಲಿಬಿಎಸ್ಎನ್ಎಲ್ ಸೇರಿದಂತೆ ವಿವಿಧ ಕಂಪನಿ ಮೊಬೈಲ್ ಟವರ್‌ಗಳ ಸಮಸ್ಯೆ ಇದೆ. ಈ ಎಲ್ಲ ಸಮಸ್ಯೆಗಳನ್ನೂಒಂದು ವಾರದಲ್ಲಿ ಬಗೆಹರಿಸುವಂತೆ ಆಯಾ ಕಂಪನಿಗಳ ಮುಖ್ಯಸ್ಥರಿಗೆ ಈಗಾಗಲೇಸೂಚಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸುಮಾರು 240ಕ್ಕೂ ಹೆಚ್ಚು ಬಿಎಸ್ಎನ್ಎಲ್ ಟವರ್‌ಗಳಿವೆ.ಅದರಲ್ಲಿ 100ಕ್ಕೂ ಹೆಚ್ಚು ಟವರ್‌ಗಳಲ್ಲಿಸಮಸ್ಯೆಗಳಿವೆ. ಇನ್ನೂ 120 ಟವರ್‌ಗಳ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ವಿದ್ಯುತ್ ಕೊರತೆ, ಜನರೇಟರ್ ಇದ್ದರೂ, ಡೀಸೆಲ್ ಹಾಕಲೂಸಿಬ್ಬಂದಿ ಇಲ್ಲ. ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆಎಂದರು.

ADVERTISEMENT

ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಸೇವೆ ದೊರೆಯುತ್ತಿಲ್ಲ. ಸಾರ್ವಜನಿಕ ವಲಯದಲ್ಲಿಸಾಕಷ್ಟುದೂರುಗಳು ಬರುತ್ತಿವೆ. ನಗರದ ಮಿತಿಯಲ್ಲಿದ್ದರೂ ಮೊಬೈಲ್ ಕಿರಿಕಿರಿ, ಅಗತ್ಯಕ್ಕಿರುವಷ್ಟು ಇಂಟರ್‌ನೆಟ್‌ವೇಗ ದೊರೆಯುತ್ತಿಲ್ಲ. ತರಂಗಾತರಂಗಳನ್ನು ಹೆಚ್ಚಿಸಬೇಕಿದೆ. ಅದಕ್ಕಾಗಿಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿನ ಮೊಬೈಲ್‌,ಇಂಟರ್‌ನೆಟ್‌ಬಳಕೆದಾರರ ಅಗತ್ಯಕ್ಕೆ ಪೂರಕವಾಗಿಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಟವರ್‌ಗಳನ್ನುನಿರ್ಮಿಸುವ ಕಾರ್ಯಕೈಗೊಳ್ಳಲಾಗಿದೆ ಎಂದರು.

ಜಿಯೊಮತ್ತು ಏರ್‌ಟೆಲ್ ಕಂಪನಿಗಳಿಗೆ ತಲಾ 69 ಟವರ್‌ಗಳನ್ನು ನಿರ್ಮಿಸಿಕೊಡುವಂತೆ ಕೋರಲಾಗಿತ್ತು. ಪ್ರಸ್ತುತ ಜಿಯೊ ಸಂಸ್ಥೆ 37 ಮತ್ತು ಏರ್‌ಟೆಲ್‌ಸಂಸ್ಥೆ 25ಟವರ್‌ಗಳನ್ನುನಿರ್ಮಿಸಿದೆ.ಮಲೆನಾಡು ಭಾಗದ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ವಿವಿಧ ಕಾರಣಗಳಿಂದಾಗಿ ಉಳಿದ ಟವರ್‌ಗಳ ನಿರ್ಮಾಣದಲ್ಲಿನಸಮಸ್ಯೆಗಳ ಕುರಿತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಟವರ್‌ಗಳಅಗತ್ಯಕ್ಕೆ ವಿದ್ಯುತ್‍ ಸರಬರಾಜು ಮಾಡಲು ಜಿಲ್ಲೆಯಲ್ಲಿ 110 ಕೆ.ವಿ.ಸಾಮರ್ಥ್ಯದ 112 ವಿದ್ಯುತ್ ಘಟಕಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದ ಬಿಎಸ್‌ಎನ್‌ಎಲ್‌‌ ಟವರ್‌ಗಳಿಗೆವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಎ.ಆರ್. ರವಿ, ಬಿಎಸ್‌ಎನ್‌ಎಲ್‌ ವಿಭಾಗೀಯ ವ್ಯವಸ್ಥಾಪಕ ಕೃಷ್ಣ ಮೊಗೇರ, ಜಿಯೊಸಂಸ್ಥೆಯ ಮಿಥುನ್, ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕಪದ್ಮನಾಭ, ಶಾಂತಕುಮಾರ್, ಮ್ಯಾಥ್ಯೂ, ಮೆಸ್ಕಾಂನ ಎಂಜಿನಿಯರ್ ನಟರಾಜ್, ಜ್ಯೋತಿಪ್ರಕಾಶ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.