ADVERTISEMENT

ಶಿವಮೊಗ್ಗ |ಸಾಂಸ್ಕೃತಿಕ ಉತ್ಸವ: ಜ್ಞಾನದೀಪ ಶಾಲೆ ಚಾಂಪಿಯನ್,ಪೇಸ್ ಕಾಲೇಜು ರ‌ನ್ನರ್

ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್: ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:30 IST
Last Updated 16 ನವೆಂಬರ್ 2025, 6:30 IST
ಶಿವಮೊಗ್ಗದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಚಾಂ‍ಪಿಯನ್ ಶ್ರೇಯವನ್ನು ಸಂಭ್ರಮಿಸಿದರು
ಶಿವಮೊಗ್ಗದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಚಾಂ‍ಪಿಯನ್ ಶ್ರೇಯವನ್ನು ಸಂಭ್ರಮಿಸಿದರು    

ಶಿವಮೊಗ್ಗ: ಎನ್.ಇ.ಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಮಹಾವಿದ್ಯಾಲಯವು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಹಾಗೂ ನಿರ್ವಹಣಾ ಕೌಶಲ ಉತ್ಸವದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ 36 ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸ್ಪರ್ಧೆಗಳಲ್ಲಿ ಶಿವಮೊಗ್ಗದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯು ವಿವಿಧ ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಉತ್ಸವದ ಚಾಂಪಿಯನ್ ಟ್ರೋಫಿ ಗೆದ್ದುಕೊಂಡಿದೆ.  ಪೇಸ್ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದಿದ್ದು, ಚಿಕ್ಕಮಗಳೂರಿನ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು:

ADVERTISEMENT

ಅತ್ಯುತ್ತಮ ಸಿ.ಇ.ಒ ಪ್ರಶಸ್ತಿ: ಭುವನ್ ಆರ್. ಸಿದ್ದರಾಮ , ಅಕ್ಷರ ಪದವಿಪೂರ್ವ ಕಾಲೇಜು. 

ಮೊಬೈಲ್ ಫೋನ್ ಛಾಯಾಚಿತ್ರಗ್ರಹಣ: ಪ್ರಥಮ–ಅನ್ವರ್ ಖಾನ್, ಮಂದಾರ ಜ್ಞಾನದಾಯಿನಿ, ದ್ವಿತೀಯ– ಪುನೀತ್ ಎಂ, ಸರ್ಕಾರಿ ಪದವಿಪೂರ್ವ ಕಾಲೇಜು, ನ್ಯಾಮತಿ. ತೃತೀಯ– ಎಂ.ವೈ ಶಾಹಿಬ್, ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಚಿಕ್ಕಮಗಳೂರು.ಗೀತೆಗಾಯನ : ಪ್ರಥಮ– ಸುಮೇಧ ಎನ್.ಎಸ್, ಪೇಸ್ ಪದವಿಪೂರ್ವ ಕಾಲೇಜು, ದ್ವಿತೀಯ– ಹೇಮಾ ಆರ್, ಕಸ್ತೂರಬಾ ಮಹಿಳಾ ಪದವಿಪೂರ್ವ ಕಾಲೇಜು, ತೃತೀಯ– ಡಿ.ವಿ.ಸ್ವರ, ಟೀಮ್ ಅಕಾಡೆಮಿ, ಶಿವಮೊಗ್ಗ

ರಸಪ್ರಶ್ನೆ ಸ್ಪರ್ಧೆ (ತಂಡಗಳು): ಪ್ರಥಮ– ಪೇಸ್ ಪದವಿಪೂರ್ವ ಕಾಲೇಜು, ಶಿವಮೊಗ್ಗ. ದ್ವಿತೀಯ– ಕಸ್ತೂರಬಾ ಪದವಿಪೂರ್ವ ಕಾಲೇಜು, ತೃತೀಯ– ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಚಿಕ್ಕಮಗಳೂರು.

ಮುಖಚಿತ್ರ ರಚನೆ: ಪ್ರಥಮ–ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್, ದ್ವಿತೀಯ– ಅರಬಿಂದೋ ಪದವಿಪೂರ್ವ ಕಾಲೇಜು, ಶಿವಮೊಗ್ಗ, ತೃತೀಯ–ಪೇಸ್ ಪದವಿಪೂರ್ವ ಕಾಲೇಜು, ಶಿವಮೊಗ್ಗ,

ಯೋಚಿಸಿ ಚಿತ್ರ ಬರೆಯುವ ಸ್ಪರ್ಧೆ: ಪ್ರಥಮ– ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್, ದ್ವಿತೀಯ– ಅರಬಿಂದೋ ಪದವಿಪೂರ್ವ ಕಾಲೇಜು, ತೃತೀಯ–ಪೇಸ್ ಪದವಿಪೂರ್ವ ಕಾಲೇಜು, ಶಿವಮೊಗ್ಗ.

ಹೊಂದಾಣಿಕೆ ಆಟಗಳು (ತಂಡಗಳು): ಪ್ರಥಮ– ಕಾನ್ಫಿಡೆಂಟ್ ಪದವಿಪೂರ್ವ ಕಾಲೇಜು, ಕಡೂರು. ದ್ವಿತೀಯ– ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್, ಶಿವಮೊಗ್ಗ, ತೃತೀಯ– ರಾಷ್ಟ್ರೀಯ ಪದವಿಪೂರ್ವ ಕಾಲೇಜು, ಕೋಣಂದೂರು.

ಸಮೂಹ ನೃತ್ಯ: ಪ್ರಥಮ– ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಚಿಕ್ಕಮಗಳೂರು. ದ್ವಿತೀಯ– ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್, ಶಿವಮೊಗ್ಗ, ತೃತೀಯ – ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು, ಶಿವಮೊಗ್ಗ.

ಫ್ಯಾಷನ್ ಶೋ: ಪ್ರಥಮ – ಕಸ್ತೂರಬಾ ಮಹಿಳಾ ಪದವಿಪೂರ್ವ ಕಾಲೇಜು, ದ್ವಿತೀಯ– ಸರ್ಕಾರಿ ಪದವಿಪೂರ್ವ ಕಾಲೇಜು, ನ್ಯಾಮತಿ. ತೃತೀಯ– ಕಾನ್ಫಿಡೆಂಟ್ ಪದವಿಪೂರ್ವ ಕಾಲೇಜು, ಕಡೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.