ADVERTISEMENT

ಸಹಾಯಕ್ಕೆ ಕರಾಟೆ ತರಬೇತುದಾರರ ಮೊರೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 12:29 IST
Last Updated 29 ಮೇ 2020, 12:29 IST
ಶಿವಮೊಗ್ಗದಲ್ಲಿ ಶುಕ್ರವಾರ ಜಿಲ್ಲಾ ಕರಾಟೆ ಡೋ ಸ್ಪೋರ್ಟ್ಸ್‌ ಅಸೋಸಿಯೇಷನ್ ಸದಸ್ಯರು ತರಬೇತುದಾರರಿಗೆ ಆರ್ಥಿಕ ಸಹಾಯ ನೀಡಬೇಕು ಎಂದು ಕೋರಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಜಿಲ್ಲಾ ಕರಾಟೆ ಡೋ ಸ್ಪೋರ್ಟ್ಸ್‌ ಅಸೋಸಿಯೇಷನ್ ಸದಸ್ಯರು ತರಬೇತುದಾರರಿಗೆ ಆರ್ಥಿಕ ಸಹಾಯ ನೀಡಬೇಕು ಎಂದು ಕೋರಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ಗೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: ಕರಾಟೆ ತರಬೇತುದಾರರಿಗೆಸರ್ಕಾರಆರ್ಥಿಕ ಸಹಾಯ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕರಾಟೆ ಡೋ ಸ್ಪೋರ್ಟ್ಸ್‌ ಅಸೋಸಿಯೇಷನ್ಸದಸ್ಯರು ಶುಕ್ರವಾರಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸರ್ಕಾರಎಲ್ಲಾ ಕುಲ ಕಸಬುದಾರರಿಗೆ ಆರ್ಥಿಕಸಹಾಯ ನೀಡುತ್ತಿದೆ. ಹಾಗೆಯೇ, ಕರಾಟೆ ತರಬೇತುದಾರಿಗೂನೀಡಬೇಕು. ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಕರಾಟೆ ತರಬೇತುದಾರರು ವಿವಿಧ ಶಾಲೆ, ಕಾಲೇಜು ಮತ್ತು ಸಾರ್ವಜನಿಕವಾಗಿ ಕರಾಟೆ ತರಬೇತಿ ನೀಡುತ್ತಾ ಬಂದಿದ್ದಾರೆ. ಕೊರೊನಾಸಮಸ್ಯೆಯಿಂದ 3 ತಿಂಗಳಿನಿಂದ ಯಾವುದೇ ಕೆಲಸವಿಲ್ಲ ಎಂದು ಮನವಿಮಾಡಿದರು.

ಸಂಘ ಸಂಸ್ಥೆಗಳೂ ನೆರವಿಗೆ ಬಂದಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ. ಶಾಲಾ ಕಾಲೇಜುಗಳುಬಾಗಿಲು ಮುಚ್ಚಿವೆ. ಹಾಗಾಗಿ, ಆರ್ಥಿಕ ನೆರವು ನೀಡಬೇಕು ಎಂದು ಕೋರಿದರು.

ADVERTISEMENT

ಸಂಘದಮುಖಂಡರಾದ ಎಂ.ಪಟೇಲ್, ಚಂದ್ರಕಾಂತ್ ಜಿ.ಭಟ್, ಜಿ.ಕೆ.ರಾಘವೇಂದ್ರ, ಕೆ.ವಿ.ಲಕ್ಷ್ಮಣ ಚಾರ್, ಹರೀಶ್‌ಕುಮಾರ್, ಅಲೋಕ್ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.