ADVERTISEMENT

ಕರ್ನಾಟಕ ಸಂಘ ಪುಸ್ತಕ ಬಹುಮಾನ ಪ್ರಕಟ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 12:03 IST
Last Updated 22 ಜೂನ್ 2020, 12:03 IST

ಶಿವಮೊಗ್ಗ:ಇಲ್ಲಿನ ಕರ್ನಾಟಕ ಸಂಘ ನೀಡುವ 2019ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಪ್ರಕಟಿಸಿದೆ.

ಡಾ.ರಾಜಶೇಖರ ಮಠಪತಿಅವರ ‘ಜಗದ್ವಂದ್ಯ ಭಾರತಂ’ ಕಾದಂಬರಿಗೆ ಕುವೆಂಪು ಪುಸ್ತಕ ಬಹುಮಾನ,ಪ್ರೊ.ವಿ. ಕೃಷ್ಣಮೂರ್ತಿಅವರ ‘ಡಬ್ಲು.ಬಿ.ಯೇಟ್ಸ್ ಕವಿಯ ಎಪ್ಪತ್ತು ಕವನಗಳು’ ಅನುವಾದಿತ ಕೃತಿಗೆಎಸ್. ವಿ. ಪರಮೇಶ್ವರ ಭಟ್ಟ, ಡಾ.ಎಚ್.ಎಸ್. ಅನುಪಮಾಅವರ ‘ನಾನು.. ಕಸ್ತೂರ್’ ಕೃತಿಗೆ ಎಂ.ಕೆ.ಇಂದಿರಾ,ಹೆಬಸೂರ ರಂಜಾನ್‍ಅವರ ಮಂಜಿನೊಳಗಣ ಕೆಂಡ ಕೃತಿಗೆ ಪಿ.ಲಂಕೇಶ್‍ಬಹುಮಾನ ದೊರೆತಿದೆ.

ಇಂದ್ರಕುಮಾರ್ ಎಚ್.ಬಿ.ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’ ಕವನ ಸಂಕಲನಕ್ಕೆ ಡಾ. ಜಿ. ಎಸ್. ಶಿವರುದ್ರಪ್ಪ, ಸಹನಾ ಕಾಂತಬೈಲುಅವರ ‘ಅನೆ ಸಾಕಲು ಹೊರಟವಳು’ ಅಂಕಣ ಬರಹಕ್ಕೆ ಹಾ.ಮಾ.ನಾಯಕ, ಮಂಜುನಾಯಕ ಚಳ್ಳೂರುಅವರ ‘ಫೂ ಮತ್ತು ಇತರ ಕಥೆಗಳಿಗೆ’ಡಾ.ಯು.ಆರ್.ಅನಂತಮೂರ್ತಿ, ಉಷಾ ನರಸಿಂಹನ್‍ಅವರ ‘ಕಂಚು ಕನ್ನಡಿ’ ನಾಟಕಕ್ಕೆಡಾ.ಕೆ. ವಿ. ಸುಬ್ಬಣ್ಣ,ವೆಂಕಟೇಶ್ ಮಾಚಕನೂರಅವರ ‘ಉತ್ಕಲವಂಗ’ ಪ್ರವಾಸ ಕೃತಿಗೆಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನ,ಡಾ.ಬಿ.ಎಸ್. ಶೈಲಜಾಅವರ ‘ಆಕಾಶದಲ್ಲಿ ಏನಿದೆ? ಏಕಿದೆ?’ ಕೃತಿಗೆಹಸೂಡಿ ವೆಂಕಟ ಶಾಸ್ತ್ರಿ,ಸತ್ಯವತಿ ಎಸ್. ಭಟ್‌ಅವರ ‘ಕಾಮನ ಬಿಲ್ಲು’ ಮಕ್ಕಳ ಸಾಹಿತ್ಯಕ್ಕೆ ನಾ.ಡಿಸೋಜ,ಡಾ.ಎಂ.ಡಿ.ಸೂರ್ಯಕಾಂತಅವರ ‘ಮಕ್ಕಳ ಪಾಲನೆ’ ಆರೋಗ್ಯ ಕೃತಿಗೆಡಾ.ಎಚ್.ಡಿ.ಚಂದ್ರಪ್ಪಗೌಡ ಬಹುಮಾನ ಲಭಿಸಿದೆ.

ADVERTISEMENT

ಪ್ರತಿ ಬಹುಮಾನವೂ ತಲಾ ₹ 10 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ ಎಂದು ಸಂಘದ ಕಾರ್ಯದರ್ಶಿ ಎಚ್‌.ಎಸ್.ನಾಗಭೂಷಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.