ADVERTISEMENT

ಮಂಡಗದ್ದೆ ವೈದ್ಯರಿಗೇ ಮಂಗನಕಾಯಿಲೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 16:58 IST
Last Updated 24 ಜನವರಿ 2019, 16:58 IST
   

ಶಿವಮೊಗ್ಗ: ಮಂಗನಕಾಯಿಲೆ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದ ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರಮೇಶ್ ಅವರಿಗೆ ಸೋಂಕು ತಗುಲಿದೆ.

ಜ್ವರದಿಂದ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಕಾಯಿಲೆ ಇರುವುದು ದೃಢಪಟ್ಟಿದೆ.

ಇದೇ ಮೊದಲ ಬಾರಿ ಭದ್ರಾವತಿ ತಾಲ್ಲೂಕಿನಸಂಕ್ಲಿಪುರ, ಬೆಳ್ಳಿಗೆರೆಗ್ರಾಮಗಳಲ್ಲಿ ದೊರೆತಮಂಗಗಳ ಮೃತದೇಹದಲ್ಲಿ ಮಂಗನ ಕಾಯಿಲೆ ವೈರಸ್‌ ಇರುವುದು ದೃಢಪಟ್ಟಿದೆ. ಅಲ್ಲಿಗೆ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಶಿವಮೊಗ್ಗ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳಲ್ಲೂ ಕಾಯಿಲೆ ಹಬ್ಬಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.