ADVERTISEMENT

ರಾಜ್ಯಸಭಾ ಚುನಾವಣೆ | ಸಾಮಾನ್ಯ ಕಾರ್ಯಕರ್ತರಿಗೆ ಮಣೆ: ಈಶ್ವರಪ್ಪ ಹರ್ಷ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 9:36 IST
Last Updated 9 ಜೂನ್ 2020, 9:36 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ    

ಶಿವಮೊಗ್ಗ: ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ರಾಜ್ಯಸಭಾ ಚುನಾವಣೆಗೆ ಆಯ್ಕೆಮಾಡಿದ ಬಿಜೆಪಿ ವರಿಷ್ಠರ ನಿರ್ಧಾರ ಸ್ವಾಗತಾರ್ಹ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆಅವರು ಮಾತನಾಡಿದರು.

ಸಾಮಾನ್ಯ ಕಾರ್ಯಕರ್ತರೂರಾಜ್ಯಸಭೆಗೆ ಆಯ್ಕೆಯಾಗಬಹುದು ಎಂಬ ಸಂದೇಶ ವರಿಷ್ಟರುನೀಡಿದ್ದಾರೆ. ಇಂತಹ ನಿರ್ಧಾರಬಿಜೆಪಿಯಲ್ಲಿ ಮಾತ್ರ ಸಾಧ್ಯ. ಅಶೋಕ್ ಗಸ್ತಿ, ಈರಣ್ಣ ಕಡಾಡಿಅವರು 40 ವರ್ಷಗಳಿಂದಪಕ್ಷಕ್ಕೆಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ವರಿಷ್ಠರುಗುರುತಿಸಿದ್ದಾರೆ. ಈ ಆಯ್ಕೆ ಪಕ್ಷದ ಕಾರ್ಯಕರ್ತರಿಗೂ ಸಂತಸ ತಂದಿದೆ. ಸಣ್ಣ ಸಣ್ಣ ಜಾತಿಗಳಿಗೂಬಿಜಿಪಿ ಆದ್ಯತೆ ನೀಡುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದರು.

ADVERTISEMENT

ಪಕ್ಷದ ರಾಜ್ಯ ಚುನಾವಣಾಸಮಿತಿ ಕಳಿಸಿದ ಪಟ್ಟಿಯಲ್ಲಿ ಈ ಇಬ್ಬರ ಹೆಸರು ಇರಲ್ಲಿಲ್ಲ. ಆದರೆ, ಪಕ್ಷದ ಕೇಂದ್ರ ಚುನಾವಣಾ ಸಮಿತಿ ಕಳಿಸಿದ ಪಟ್ಟಿಯಲ್ಲಿ ಇಬ್ಬರ ಹೆಸರು ಇತ್ತು. ಅನಿರೀಕ್ಷಿತ ಆಯ್ಕೆ ಕಾರಣಪಕ್ಷದಲ್ಲಿ ಯಾರಿಗೂ ಅಸಮಾಧಾನ ಇಲ್ಲಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.