ADVERTISEMENT

ಐಎಂಎ ಹಗರಣ ಸಿಬಿಐಗೆ ವಹಿಸಲು ಈಶ್ವರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 14:29 IST
Last Updated 12 ಜೂನ್ 2019, 14:29 IST

ಶಿವಮೊಗ್ಗ: ಐಎಂಎ ಹಗರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ನಗರದ ವಿವಿಧ ಬಡಾವಣೆಗಳಲ್ಲಿ ಬುಧವಾರ ‘ಸ್ಮಾರ್ಟ್‌ಸಿಟಿ’ ಕಾಮಗಾರಿಗಳ ವೀಕ್ಷಣೆಯ ನಂತರ ಅವರು ಸುದ್ದಿಗಾರರ ಜತೆ ಅವರು ಮಾತನಾಡಿದರು.

ಐಎಂಎ ಹಗರಣ ಮೊದಲು ₹ 400 ಕೋಟಿ ಎಂದು ಭಾವಿಸಲಾಗಿತ್ತು. ಈಗ ಅದು ₹ 10 ಸಾವಿರ ಕೋಟಿ ದಾಟಿದೆ. ಈ ಹಗರಣದಲ್ಲಿ ರಾಜಕಾರಣಿಗಳು, ಪ್ರಭಾವಿ ಮಂತ್ರಿಗಳು ಸೇರಿದ್ದಾರೆ ಎಂದು ಗುಮಾನಿ ಇದೆ. ಇಷ್ಟೆಲ್ಲ ಹಗರಣ ನಡೆದರೂ ರಾಜ್ಯ ಸರ್ಕಾರ ತಟಸ್ಥ ಧೋರಣೆ ಅನುಸರಿಸಿದೆ ಎಂದು ದೂರಿದರು.

ADVERTISEMENT

ಈ ಹಗರಣದ ವಿರುದ್ಧ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಗೃಹಮಂತ್ರಿ ಹೇಳಿದ್ದಾರೆ. ಅವರ ಹೇಳಿಕೆ ಗಮನಿಸಿದರೆ ಹೂಡಿಕೆದಾರರಿಗೆ ರಕ್ಷಣೆ ಅಸಾಧ್ಯ ಎನಿಸುತ್ತಿದೆ. ಹೂಡಿಕೆದಾರರು ಒಡವೆ, ಹೊಲ, ಆಸ್ತಿ ಮಾರಿ ಹೂಡಿಕೆ ಮಾಡಿದ್ದಾರೆ. ಸರ್ಕಾರ ತಕ್ಷಣ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.