ADVERTISEMENT

ಕಾಂಗ್ರೆಸ್, ಜೆಡಿಎಸ್‌ಗೆ ತಿರುಕನ ಕನಸು: ಈಶ್ವರಪ್ಪ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 13:15 IST
Last Updated 4 ಡಿಸೆಂಬರ್ 2019, 13:15 IST

ಶಿವಮೊಗ್ಗ: ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೂ ತೇಲಿ ಬಿಡುತ್ತಿದ್ದಾರೆ.ಇವರು ಯಾರೂಮುಖ್ಯಮಂತ್ರಿಯಾಗುವುದಿಲ್ಲ. ಅದು ಭ್ರಮೆ ಎಂದು ಸಚಿವ ಕೆ.ಎಸ್.ಈಶ್ವರಪ್ಪಕುಟುಕಿದರು.

ನಗರದಲ್ಲಿ ಬುಧವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಉಪ ಚುನಾವಣೆಯ ಪ್ರಚಾರ ಮುಗಿದಿದೆ. ಬಿಜೆಪಿ ಎಲ್ಲ 15 ಸ್ಥಾನಗಳಲ್ಲೂಗೆಲುವು ಸಾಧಿಸಲಿದೆ.8 ಸ್ಥಾನಗಳು ಗೆದ್ದರೂ ಸಾಕುಮುಂದಿನ ಮೂರು ವರ್ಷ ಬಿಜೆಪಿ ಸರ್ಕಾರ ಭದ್ರವಾಗಿರುತ್ತದೆ. ಬಿ.ಎಸ್.ಯಡಿಯೂರಪ್ಪಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದರು.

ADVERTISEMENT

ಕಾಂಗ್ರೆಸ್ ಮುಖಂಡರೇಗೊಂದಲದಹೇಳಿಕೆ ನೀಡುತ್ತಿದ್ದಾರೆ. ಈ ಎರಡೂ ಪಕ್ಷಗಳದು ಈಗ ಮುಗಿದ ಕಥೆ.ಚುನಾವಣೆ ಫಲಿತಾಂಶದ ದಿನವೇ ಈ ಎರಡು ಪಕ್ಷಗಳ ಭವಿಷ್ಯನಿರ್ಧಾರವಾಗುತ್ತದೆ. ಅವರ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವುದೇ ಅನುಮಾನ ಎಂದು ಛೇಡಿಸಿದರು.

ಕೆಪಿಸಿಸಿ ಅಧ್ಯಕ್ಷದಿನೇಶ್ ಗುಂಡೂರಾವ್ ಅವರು ಬಿಜೆಪಿ ಶಾಸಕರು ತಮ್ಮ ಪಕ್ಷಕ್ಕೆ ಬರುತ್ತಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ಬಿಜೆಪಿಶಾಸಕರ ಮುಟ್ಟುವ ಧೈರ್ಯ ಅವರಿಗೆ ಇಲ್ಲ. ಮೊದಲುಅವರ ಶಾಸಕರನ್ನೇಹಿಡಿದಿಟ್ಟುಕೊಳ್ಳಲಿ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.