ADVERTISEMENT

ಕುಂಸಿ | ದೇವಸ್ಥಾನದ ಹುಂಡಿ ಕಳವು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 14:36 IST
Last Updated 7 ಆಗಸ್ಟ್ 2024, 14:36 IST

ಕುಂಸಿ: ಸಮೀಪದ ಶೆಟ್ಟಿಕೆರೆಯ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಹುಂಡಿ ಕಳುವಾಗಿದೆ.

ಮಂಗಳವಾರ ಬೆಳಿಗ್ಗೆ ಗ್ರಾಮದ ಪರಮೇಶ್ವರಪ್ಪ ಅವರು ದೇವಸ್ಥಾನದ ಬಳಿ ಪ್ರಾರ್ಥಿಸಲು ಹೋದಾಗ ಬೀಗ ಒಡೆದಿರುವುದು ಕಂಡುಬಂದಿದೆ. ತಕ್ಷಣವೇ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಗ್ರಾಮಸ್ಥರು ದೇವಸ್ಥಾನದ ಒಳಗೆ ಹೋಗಿ ನೋಡಿದಾಗ ಗರ್ಭಗುಡಿಯ ಬಾಗಿಲು ಒಡೆದು ದೇವಸ್ಥಾನದ ಹುಂಡಿ ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಶೆಟ್ಟಿಕೆರೆಯಿಂದ ರೆಚ್ಚಿಕೊಪ್ಪ ಹೋಗುವ ರಸ್ತೆಯಲ್ಲಿ ಖಾಲಿ ಹುಂಡಿ ಎಸೆದು ಪರಾರಿಯಾಗಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.